Philippians
ಪೌಲನು ಫಿಲಿಪ್ಪಿಯವರಿಗೆ ಬರೆದ ಪತ್ರಿಕೆ
ಪೀಠಿಕೆ
೧ ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ * 2 ಕೊರಿ. 1:1; ಕೊಲೊ. 1:2ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ ಅ. ಕೃ. 20:28; 1 ತಿಮೊ. 3:1-7; ತೀತ. 1:6-9ಸಭಾಧ್ಯಕ್ಷರಿಗೂ ಹಾಗೂ 1 ತಿಮೊ. 3:8,12ಸಭಾಸೇವಕರಿಗೂ ಬರೆಯುವುದೇನೆಂದರೆ, ೨ ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಲಭಿಸಲಿ.
ಕೃತಜ್ಞತಾಸ್ತುತಿಯೂ ಪ್ರಾರ್ಥನೆಗಳೂ
೩-೪  § ರೋಮಾ. 1:9; ಎಫೆ. 1:16ನಾನು ನಿಮ್ಮನ್ನು ನೆನಪಿಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ, ನಾನು ನಿಮಗಾಗಿ ದೇವರನ್ನು ಪ್ರಾರ್ಥಿಸುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಪ್ರಾರ್ಥಿಸುವವನಾಗಿದ್ದೇನೆ. ೫ ನೀವು ಮೊದಲಿನಿಂದ ಇಂದಿನವರೆಗೂ * ಫಿಲಿ. 2:12; 4:15; ಅ. ಕೃ. 16:12-40ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು ರೋಮಾ. 1:8ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ. ೬ ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಕೀರ್ತ. 138:8; 1 ಥೆಸ. 5:24ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು. ೭ ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. § ಅ. ಕೃ. 20:23; 26:29; ಕೊಲೊ. 4:18; 2 ತಿಮೊ. 2:9; ಎಫೆ. 3:1ನಾನು ಬಂಧನದಲ್ಲಿರುವಾಗಲೂ, * ವ. 16ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು 2 ಕೊರಿ. 7:3ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ. ೮ ಕ್ರಿಸ್ತ ಯೇಸುವಿಗಿರುವಂಥ ಕನಿಕರದಿಂದ ಫಿಲಿ. 4:1; ರೋಮಾ. 1:11; 1 ಥೆಸ. 3:6; 2 ತಿಮೊ. 1:4ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ. § ರೋಮಾ. 1:9; 9:1ಇದಕ್ಕೆ ದೇವರೇ ಸಾಕ್ಷಿ. ೯ ಮತ್ತು * 1 ಥೆಸ. 3:12; 2 ಥೆಸ. 1:3ನಿಮ್ಮ ಪ್ರೀತಿಯು ಇನ್ನೂ ಅಧಿಕವಾಗಿ ಹೆಚ್ಚುತ್ತಾ ಕೊಲೊ. 1:9; 3:10; ಫಿಲೆ. 6ಪೂರ್ಣ ಜ್ಞಾನ ವಿವೇಕಗಳಿಂದ ಕೂಡಿರಬೇಕೆಂದು ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ. ೧೦ ಹೀಗೆ ರೋಮಾ. 2:18ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು § 1 ಥೆಸ. 3:13; 5:23ಸರಳರಾಗಿಯೂ, ನಿರ್ಮಲರಾಗಿಯೂ, ೧೧ ಯೇಸು ಕ್ರಿಸ್ತನ ಮೂಲಕವಾಗಿರುವ * ಕೊಲೊ. 1:6,10; ಯಾಕೋಬ 3:18ನೀತಿಯೆಂಬ ಫಲದಿಂದ ತುಂಬಿದವರಾಗಿಯೂ ಇರಬೇಕೆಂದು ಎಫೆ. 1:12,14ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಸಲ್ಲಿಸಬೇಕೆಂತಲೂ ಬೇಡಿಕೊಳ್ಳುತ್ತೇನೆ.
ಸುವಾರ್ತೆಯ ಅಭಿವೃದ್ಧಿ
೧೨ ಸಹೋದರರೇ, ನನಗೆ ಸಂಭವಿಸಿರುವಂಥವುಗಳೆಲ್ಲವೂ ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. ೧೩  ಲೂಕ. 21:13ಹೇಗೆಂದರೆ ನನ್ನ ಸೆರೆವಾಸವು ಕ್ರಿಸ್ತನ ನಿಮಿತ್ತವೇ ಎಂದು § ಅ. ಕೃ. 28:30,31; 2 ಕೊರಿ. 2:9ಅರಮನೆಯ ಕಾವಲುಗಾರರೆಲ್ಲರಿಗೂ ಹಾಗೂ ಉಳಿದವರೆಲ್ಲರಿಗೂ ತಿಳಿಯಲ್ಪಟ್ಟಿತು. ೧೪ ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ * ಅ. ಕೃ. 4:31ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ. ೧೫  2 ಕೊರಿ. 11:13ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಮನಸ್ಸಿನಿಂದ ಮತ್ತು ಬೇರೆ ಕೆಲವರು ಒಳ್ಳೆಯ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ. ೧೬ ಇವರಂತೂ ನಾನು ವ. 7ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುವುದಕ್ಕಾಗಿ ಇಲ್ಲಿ ಹಾಕಲ್ಪಟ್ಟಿದ್ದೆನೆಂದು ತಿಳಿದು ಪ್ರೀತಿಯಿಂದ ಪ್ರಸಿದ್ಧಿಪಡಿಸುತ್ತಿದ್ದಾರೆ. ೧೭ ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು § ಫಿಲಿ. 2:3; ಯಾಕೋಬ 3:14ಪ್ರಸಿದ್ಧಿಪಡಿಸುತ್ತಾರೆ. ೧೮ ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು. ೧೯ ಯಾಕೆಂದರೆ * 2 ಕೊರಿ. 1:11ನಿಮ್ಮ ವಿಜ್ಞಾಪನೆಯಿಂದಲೂ ಮತ್ತು ಅ. ಕೃ. 16:7; ಗಲಾ. 3:5ಯೇಸುಕ್ರಿಸ್ತನ ಆತ್ಮನ ಸಹಾಯದಿಂದಲೂ ಇದು ನನ್ನ ಬಿಡುಗಡೆಗೆ ಅನುಕೂಲವಾಗುವುದೆಂದು ಬಲ್ಲೆನು. ೨೦ ಹೇಗೆಂದರೆ ರೋಮಾ. 5:5; 2 ತಿಮೊ. 2:15ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ § ರೋಮಾ. 14:8ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ * 1 ಕೊರಿ. 6:20ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು. ೨೧  ಗಲಾ. 2:20ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ. ೨೨ ಶರೀರದಲ್ಲಿಯೇ ಬದುಕಬೇಕಾದ್ದಲ್ಲಿ ನನ್ನ ಕೆಲಸಮಾಡಿ ಫಲಹೊಂದಲು ನನಗೆ ಸಾಧ್ಯವಾಗುವುದು. ಹೀಗಿರಲಾಗಿ ನಾನು ಯಾವುದನ್ನಾರಿಸಿಕೊಳ್ಳಬೇಕೆನ್ನುವುದು ನನಗೆ ತಿಳಿಯದು. ೨೩  2 ಕೊರಿ. 5:8ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ, § 2 ತಿಮೊ. 4:6ಇಲ್ಲಿಂದ ಹೊರಟು * ಯೋಹಾ. 12:26ಕ್ರಿಸ್ತನ ಜೊತೆಯಲ್ಲಿರಬೇಕೆಂಬುದೇ ನನ್ನ ಅಭಿಲಾಷೆ, ಅದು ಅತ್ಯುತ್ತಮವಾಗಿದೆ. ೨೪ ಆದರೆ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ. ೨೫ ಆದ್ದರಿಂದ ನಿಮಗೆ ಕ್ರಿಸ್ತನಂಬಿಕೆಯಲ್ಲಿ ಅಭಿವೃದ್ಧಿಯೂ ರೋಮಾ. 15:13ಆನಂದವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ. ೨೬ ಹೀಗೆ ನಾನು ತಿರುಗಿ ನಿಮ್ಮ ಬಳಿಗೆ ಬರುವುದರಿಂದ 2 ಕೊರಿ. 1:14ನೀವು ಕ್ರಿಸ್ತ ಯೇಸುವಿನ ವಿಷಯವಾಗಿ ಉಲ್ಲಾಸಪಡುವುದಕ್ಕೆ ನನ್ನಿಂದ ಅಧಿಕ ಆಸ್ಪದವಿರುವುದು.
ಕ್ರೈಸ್ತರು ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕೆಂಬ ಬೋಧನೆ
೨೭  § ಎಫೆ. 4:1ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ* 1 ಕೊರಿ. 16:13 ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಫಿಲಿ. 2:2ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು. ೨೮ ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, ಅ. ಕೃ. 14:22ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ. ೨೯ ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ § ಮತ್ತಾ 5:12; ಅ. ಕೃ. 14:22ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ. ೩೦ ಹೀಗೆ ನೀವು * ಅ. ಕೃ. 16:19-40ನನ್ನಲ್ಲಿ ಕಂಡಂಥ ಮತ್ತು ಈಗ ನನ್ನ ಕುರಿತಾಗಿ ಕೇಳುವಂಥ ಕೊಲೊ. 1:29; 2:1ಅದೇ ಹೋರಾಟವು ನಿಮಗೂ ಉಂಟು.

*೧:೧ 2 ಕೊರಿ. 1:1; ಕೊಲೊ. 1:2

೧:೧ ಅ. ಕೃ. 20:28; 1 ತಿಮೊ. 3:1-7; ತೀತ. 1:6-9

೧:೧ 1 ತಿಮೊ. 3:8,12

§೧:೩-೪ ರೋಮಾ. 1:9; ಎಫೆ. 1:16

*೧:೫ ಫಿಲಿ. 2:12; 4:15; ಅ. ಕೃ. 16:12-40

೧:೫ ರೋಮಾ. 1:8

೧:೬ ಕೀರ್ತ. 138:8; 1 ಥೆಸ. 5:24

§೧:೭ ಅ. ಕೃ. 20:23; 26:29; ಕೊಲೊ. 4:18; 2 ತಿಮೊ. 2:9; ಎಫೆ. 3:1

*೧:೭ ವ. 16

೧:೭ 2 ಕೊರಿ. 7:3

೧:೮ ಫಿಲಿ. 4:1; ರೋಮಾ. 1:11; 1 ಥೆಸ. 3:6; 2 ತಿಮೊ. 1:4

§೧:೮ ರೋಮಾ. 1:9; 9:1

*೧:೯ 1 ಥೆಸ. 3:12; 2 ಥೆಸ. 1:3

೧:೯ ಕೊಲೊ. 1:9; 3:10; ಫಿಲೆ. 6

೧:೧೦ ರೋಮಾ. 2:18

§೧:೧೦ 1 ಥೆಸ. 3:13; 5:23

*೧:೧೧ ಕೊಲೊ. 1:6,10; ಯಾಕೋಬ 3:18

೧:೧೧ ಎಫೆ. 1:12,14

೧:೧೩ ಲೂಕ. 21:13

§೧:೧೩ ಅ. ಕೃ. 28:30,31; 2 ಕೊರಿ. 2:9

*೧:೧೪ ಅ. ಕೃ. 4:31

೧:೧೫ 2 ಕೊರಿ. 11:13

೧:೧೬ ವ. 7

§೧:೧೭ ಫಿಲಿ. 2:3; ಯಾಕೋಬ 3:14

*೧:೧೯ 2 ಕೊರಿ. 1:11

೧:೧೯ ಅ. ಕೃ. 16:7; ಗಲಾ. 3:5

೧:೨೦ ರೋಮಾ. 5:5; 2 ತಿಮೊ. 2:15

§೧:೨೦ ರೋಮಾ. 14:8

*೧:೨೦ 1 ಕೊರಿ. 6:20

೧:೨೧ ಗಲಾ. 2:20

೧:೨೩ 2 ಕೊರಿ. 5:8

§೧:೨೩ 2 ತಿಮೊ. 4:6

*೧:೨೩ ಯೋಹಾ. 12:26

೧:೨೫ ರೋಮಾ. 15:13

೧:೨೬ 2 ಕೊರಿ. 1:14

§೧:೨೭ ಎಫೆ. 4:1

*೧:೨೭ 1 ಕೊರಿ. 16:13

೧:೨೭ ಫಿಲಿ. 2:2

೧:೨೮ ಅ. ಕೃ. 14:22

§೧:೨೯ ಮತ್ತಾ 5:12; ಅ. ಕೃ. 14:22

*೧:೩೦ ಅ. ಕೃ. 16:19-40

೧:೩೦ ಕೊಲೊ. 1:29; 2:1