2 Corinthians
* ಎಫೆ. 1:1; ಕೊಲೊ. 1:1ಅಪೊಸ್ತಲನಾದ ಪೌಲನು ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ
ಪೀಠಿಕೆ
೧ ದೇವರ ಚಿತ್ತಾನುಸಾರ ಕ್ರಿಸ್ತ ಯೇಸು ಕ್ರಿಸ್ತನ ಎಫೆ. 1:1; ಕೊಲೊ. 1:1ಅಪೊಸ್ತಲನಾದ ಪೌಲನೂ ಸಹೋದರನಾದ ತಿಮೊಥೆಯನೂ ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಅಖಾಯ ಸೀಮೆಯಲ್ಲಿ ಇರುವ ದೇವಜನರೆಲ್ಲರಿಗೂ ಬರೆಯುವುದೇನಂದರೆ, ೨  ರೋಮಾ. 1:7ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು, ಶಾಂತಿಯು ಉಂಟಾಗಲಿ.
ಪೌಲನು ತನಗೆ ಉಂಟಾದ ಆದರಣೆಯಿಂದ ಅನೇಕರಿಗೆ ಉಪಯೋಗ ಉಂಟಾಗುವುದೆಂದು ಹೇಳಿದ್ದು
೩  § ಎಫೆ. 1:3, ರೋಮಾ. 15:6ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕನಿಕರವುಳ್ಳ ತಂದೆಯೂ * ಯೆಶಾ. 51:12, 66:13ಸಕಲ ವಿಧವಾಗಿ ಸಂತೈಸುವ ದೇವರೂ ಆಗಿದ್ದು, ೪ ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುವವನಾಗಿದ್ದಾನೆ. ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವುದಕ್ಕೆ ಶಕ್ತರಾಗುತ್ತೇವೆ. ೫ ಏಕೆಂದರೆ 2 ಕೊರಿ. 4:10, ಕೊಲೊ. 1:24ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಕ್ರಿಸ್ತನ ಮೂಲಕವಾಗಿ ಹೆಚ್ಚಾದ ಆದರಣೆಯೂ ನಮಗೆ ದೊರೆಯುತ್ತದೆ. ೬ ನಾವು ಕಷ್ಟಗಳನ್ನನುಭವಿಸುವುದರಿಂದ ನಿಮಗೆ ಆದರಣೆಯೂ, ರಕ್ಷಣೆಯೂ ಉಂಟಾಗುತ್ತದೆ. ನಾವು ಸಮಾಧಾನದಿಂದಿರುವುದಾದರೆ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ. ೭  ರೋಮಾ. 8:17ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರವೇ ಆದರಣೆಯೂ ಪಾಲುಗಾರರಾಗಿದ್ದೀರೆಂದು ತಿಳಿದಿರುವುದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ. ೮ ಪ್ರಿಯರೇ, § ಅ. ಕೃ. 19:23, 1 ಕೊರಿ. 15:32ಏಷ್ಯಾ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು. ೯ ಸಾಯುವುದು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ * 2 ಕೊರಿ. 4:14ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು. ೧೦-೧೧ ಆತನು ನಮ್ಮನ್ನು ಅಂಥ ಭಯಂಕರ ಮರಣದಿಂದ ತಪ್ಪಿಸಿದನು. ಮುಂದೆಯೂ ಎಂದೆಂದೂ ತಪ್ಪಿಸುವನು. ರೋಮಾ. 15:30, ಫಿಲಿ. 1:19ನೀವು ನಮಗೋಸ್ಕರ ಪ್ರಾರ್ಥನೆ ಮಾಡುವುದರ ನಿಮಿತ್ತವಾಗಿ ಇನ್ನು ಮುಂದೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. 2 ಕೊರಿ. 4:15, 9:11-12ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವುದು. ೧೨ ನಾವು § 1 ಕೊರಿ. 2:4,13ಕೇವಲ ಮನುಷ್ಯಜ್ಞಾನವನ್ನು ಬಳಸದೇ ದೇವರ ಕೃಪೆಯನ್ನು ಆಶ್ರಯಿಸಿ ಪರಿಶುದ್ಧರಾಗಿಯೂ, * 2 ಕೊರಿ. 2:17, 4:2ಪ್ರಾಮಾಣಿಕರಾಗಿಯೂ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡೆದುಕೊಂಡೆವೆಂದು ನಮ್ಮ ಮನಸಾಕ್ಷಿ ಹೇಳುತ್ತದೆ. ಇದೇ ನಮಗಿರುವ ಹೆಮ್ಮೆ. ೧೩ ನೀವು ನಮ್ಮ ಪತ್ರಿಕೆಗಳಲ್ಲಿ ಓದಿ ಅರ್ಥಮಾಡಿಕೊಂಡ ಸಂಗತಿಗಳನ್ನೇ ಹೊರತು ಬೇರೆ ಯಾವುದನ್ನು ನಾವು ನಿಮಗೆ ಬರೆಯಲಿಲ್ಲ. ೧೪ ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಕಡೆ ವರೆಗೂ ಒಪ್ಪಿಕೊಳ್ಳುವಿರಿ ಎಂಬುದಾಗಿಯೂ, ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ನೀವು ನಮ್ಮ ಅಭಿಮಾನಕ್ಕೆ ಕಾರಣವಾದಂತೆ ನಾವು ನಿಮ್ಮ ಅಭಿಮಾನಕ್ಕೆ ಕಾರಣರಾಗುವಿರಿ ಎಂದು ನೀವು ಒಪ್ಪಿಕೊಳ್ಳುತ್ತಿರಿ.
ಪೌಲನು ಕೊರಿಂಥ ಪಟ್ಟಣಕ್ಕೆ ಹೋಗುವುದನ್ನು ಮುಂದಕ್ಕೆ ಹಾಕಿದ್ದು
೧೫ ಈ ನಂಬಿಕೆಯಲ್ಲಿ ಸ್ಥಿರಪಟ್ಟು ನಾನು ನಿಮ್ಮ ಬಳಿಗೆ ಬರುವುದರಿಂದ ಅ. ಕೃ. 18:1-18ಮತ್ತೊಮ್ಮೆ ನೀವು ಆಶೀರ್ವಾದಲಾಭ ಪಡೆಯಬಹುದೆಂದು ಯೋಚಿಸಿದ್ದೆನು. ೧೬  ಅ. ಕೃ. 19:21, 1 ಕೊರಿ. 16:15-17ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಅನಂತರ ಮಕೆದೋನ್ಯವನ್ನು ಬಿಟ್ಟು ತಿರುಗಿ ನಿಮ್ಮ ಬಳಿಗೆ ಬಂದು ನೀವು ನನ್ನನ್ನು ಯೂದಾಯಕ್ಕೆ ಕಳುಹಿಸಿ ಕೊಡಬೇಕೆಂದು ಯೋಚಿಸಿದ್ದೆನು. ೧೭ ಹೀಗೆ ಯೋಚಿಸಿದ್ದರಿಂದ ನಾನು ಚಂಚಲಚಿತ್ತನಾಗಿದ್ದೇನೋ? ಕೇವಲ ಪ್ರಾಪಂಚಿಕ ಗುಣಮಟ್ಟಕ್ಕೆ ಯೋಚಿಸಿ ಈ ಕ್ಷಣ ಹೌದು ಮರು ಕ್ಷಣ ಇಲ್ಲ ಎಂದು ಹೇಳುವವನಂತಿದ್ದೇನೋ? ಎಂದಿಗೂ ಇಲ್ಲ. ೧೮ ದೇವರು § 1 ಕೊರಿ. 1:9ನಂಬಿಗಸ್ತನಾಗಿರುವಂತೆ ನಾವು ನಿಮಗೆ ಹೇಳುವ ಮಾತು ಒಂದು ಸಾರಿ ಹೌದೆಂದು ಮತ್ತೊಂದು ಸಾರಿ ಇಲ್ಲವೆಂದು ಆಗಿರಲು ಸಾಧ್ಯವಿಲ್ಲ. ಅದಕ್ಕೆ ನಂಬಿಗಸ್ತನಾದ ದೇವರೇ ಸಾಕ್ಷಿಯಾಗಿದ್ದಾನೆ. ೧೯ ನಾನೂ, * ಅ. ಕೃ. 15:22ಸಿಲ್ವಾನನೂ, ತಿಮೊಥೆಯನೂ ನಿಮ್ಮಲ್ಲಿ ಪ್ರಸಿದ್ಧಿ ಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಈ ಕ್ಷಣ ಹೌದು ಮರುಕ್ಷಣ ಇಲ್ಲ ಎಂದು ಹೇಳುವವನಲ್ಲ. ಇಬ್ರಿ. 13:8ಆತನಲ್ಲಿ ಹೌದೆಂಬುದೇ ನೆಲೆಗೊಂಡಿದೆ. ೨೦  ಇಬ್ರಿ. 10:23 ಆದ್ದರಿಂದ ದೇವರ ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತನಲ್ಲಿ ಹೌದು ಎಂಬುದೇ ಆಗಿದೆ. § ಯೆಶಾ. 65:16, ಪ್ರಕ. 3:14ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ಆತನ ಮೂಲಕವಾಗಿ ನಾವು ಆಮೆನ್ ಎಂದು ಹೇಳುತ್ತೇವೆ. ೨೧ ನಮ್ಮನ್ನು ಅಭಿಷೇಕಿಸಿ * ಅಭಿಷಿಕ್ತನಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ. ೨೨ ಆತನು ಎಫೆ. 1:13, 4:30ನಮ್ಮ ಮೇಲೆ ತನ್ನ ಮುದ್ರೆಯನ್ನೊತ್ತಿ ನಮ್ಮ ಹೃದಯಗಳಲ್ಲಿ 2 ಕೊರಿ. 5:5ಪವಿತ್ರಾತ್ಮನನ್ನು ಮುಂಗಡ ಪಾವತಿಯಾಗಿ ಅನುಗ್ರಹಿಸಿದ್ದಾನೆ.
೨೩  § 2 ಕೊರಿ. 2:1-3, 1 ಕೊರಿ. 4:21ನೀವು ನನ್ನ ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕೆಂದೇ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯ ಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ. ೨೪ ನಿಮ್ಮ ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ * 1 ಪೇತ್ರ. 5:3, 2 ಕೊರಿ. 4:5ದೊರೆತನಮಾಡುವವರೆಂಬುದಾಗಿ ಅಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿರುವಂತೆ ನಿಮ್ಮ ಸಂತೋಷಕ್ಕೆ ನಾವು ಸಹಾಭಾಗಿಗಳಾಗಿದೇವಷ್ಟೇ.

*^ ಎಫೆ. 1:1; ಕೊಲೊ. 1:1

೧:೧ ಎಫೆ. 1:1; ಕೊಲೊ. 1:1

೧:೨ ರೋಮಾ. 1:7

§೧:೩ ಎಫೆ. 1:3, ರೋಮಾ. 15:6

*೧:೩ ಯೆಶಾ. 51:12, 66:13

೧:೫ 2 ಕೊರಿ. 4:10, ಕೊಲೊ. 1:24

೧:೭ ರೋಮಾ. 8:17

§೧:೮ ಅ. ಕೃ. 19:23, 1 ಕೊರಿ. 15:32

*೧:೯ 2 ಕೊರಿ. 4:14

೧:೧೦-೧೧ ರೋಮಾ. 15:30, ಫಿಲಿ. 1:19

೧:೧೦-೧೧ 2 ಕೊರಿ. 4:15, 9:11-12

§೧:೧೨ 1 ಕೊರಿ. 2:4,13

*೧:೧೨ 2 ಕೊರಿ. 2:17, 4:2

೧:೧೫ ಅ. ಕೃ. 18:1-18

೧:೧೬ ಅ. ಕೃ. 19:21, 1 ಕೊರಿ. 16:15-17

§೧:೧೮ 1 ಕೊರಿ. 1:9

*೧:೧೯ ಅ. ಕೃ. 15:22

೧:೧೯ ಇಬ್ರಿ. 13:8

೧:೨೦ ಇಬ್ರಿ. 10:23

§೧:೨೦ ಯೆಶಾ. 65:16, ಪ್ರಕ. 3:14

*೧:೨೧ ಅಭಿಷಿಕ್ತನ

೧:೨೨ ಎಫೆ. 1:13, 4:30

೧:೨೨ 2 ಕೊರಿ. 5:5

§೧:೨೩ 2 ಕೊರಿ. 2:1-3, 1 ಕೊರಿ. 4:21

*೧:೨೪ 1 ಪೇತ್ರ. 5:3, 2 ಕೊರಿ. 4:5