Ephesians
ಪೌಲನು ಎಫೆಸದವರಿಗೆ ಬರೆದ ಪತ್ರಿಕೆ
ಪೀಠಿಕೆ
೧  * 1 ಕೊರಿ. 1:1 ನೋಡಿರಿದೇವರ ಚಿತ್ತಾನುಸಾರವಾಗಿ ಕೊರಿ. 1:1 ನೋಡಿರಿಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಕೆಲವು ಪ್ರತಿಗಳಲ್ಲಿ ಎಫೆಸದಲ್ಲಿರುವ ಎಂಬ ಪದ ಇಲ್ಲ; ಕೊಲೊ. 4:16 ನೋಡಿರಿ. ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ § ಕೊಲೊ 1:2:ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ, ೨  * ರೋಮಾ. 1:7 ನೋಡಿರಿ. ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ.
ಕ್ರಿಸ್ತನಲ್ಲಿರುವ ಆತ್ಮಿಕ ಆಶೀರ್ವಾದಗಳು
೩ ನಮ್ಮ ಕರ್ತನಾದ ಯೇಸುಕ್ರಿಸ್ತನ ರೋಮಾ. 15:6 ನೋಡಿರಿ. ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು ಎಫೆ. 1:20; 2:6; 3:10:ಪರಲೋಕದಲ್ಲಿನ ಸಕಲ ಆತ್ಮಿಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. ೪ ನಾವು ಆತನ ಸನ್ನಿಧಿಯಲ್ಲಿ § ಎಫೆ. 5:27; ಕೊಲೊ. 1:22; 1 ಥೆಸ. 4:7:ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು * ಎಫೆ. 2:10; 2 ಥೆಸ. 2:13; 1 ಪೇತ್ರ 1:2:ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. ೫  ಎಫೆ. 1:12,14:ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ರೋಮಾ. 8 15: ನಮ್ಮನ್ನು ತನ್ನ ಮಕ್ಕಳನ್ನಾಗಿ ದತ್ತು ತೆಗೆದುಕೊಳ್ಳಲು ಪ್ರೀತಿಯಿಂದ § ಎಫೆ 1:9,11; ರೋಮಾ. 8:29,30. ಮೊದಲೇ ಸಂಕಲ್ಪಮಾಡಿದ್ದನು. ೬ ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು. ೭ ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ * ಅ. ಕೃ. 20:28:ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಕೊಲೊ. 1:14; ಅ. ಕೃ. 2:38:ಪಾಪ ಕ್ಷಮಾಪಣೆಯೆಂಬ ರೋಮಾ. 3:24; 1 ಕೊರಿ. 1:30. ವಿಮೋಚನೆಯು ಉಂಟಾಯಿತು. ೮ ಈ ಕೃಪೆಯನ್ನು ಆತನು § ರೋಮಾ. 16:25:ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ. ೯ ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ. ೧೦ ಕಾಲವು ಪರಿಪೂರ್ಣವಾದಾಗ, ಆತನು * ಕೊಲೊ. 1:16, 20:ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನ ಅಧಿಪತ್ಯಕ್ಕೆ ಅಥವಾ ಪ್ರಭುತ್ವಕ್ಕೆ ಅಧೀನಪಡಿಸಬೇಕೆಂದಿದ್ದನು. ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.
೧೧ ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ಎಫೆ. 1:5; 3:11; ರೋಮ. 8:28:ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. ೧೨ ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
೧೩ ನೀವು ಸಹ ನಿಮ್ಮ ರಕ್ಷಣಾ § ಕೊಲೊ. 1:7:ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, * ಅ. ಕೃ. 1:4:ವಾಗ್ದಾನಮಾಡಲ್ಪಟ್ಟ ಎಫೆ. 4:30. ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ. ೧೪  1 ಪೇತ್ರ. 2:9; ತೀತ. 2:14:ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ § ಕೆಲವು ಪ್ರತಿಗಳಲ್ಲಿ, ಪವಿತ್ರಾತ್ಮವರವು ನಮ್ಮ ಬಾಧ್ಯತೆಗೆ ಸಂಚಕಾರವಾಗಿದೆ ಎಂದು ಬರೆದಿದೆ. ಪವಿತ್ರಾತ್ಮನು * ಅ. ಕೃ. 20:32; ಎಫೆ. 1:18; 2 ಕೊರಿ. 1:22; ಎಫೆ. 4:30. ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ ಮುಂಚಿತವಾಗಿ ಕೊಟ್ಟ ಹಣ ಅಥವಾ ಕಳುಹಿಸಿದ ಸಹಾಯಕ, ಮುಂಚಿತವಾಗಿ ಗೊತ್ತುಮಾಡಿದ ವ್ಯವಸ್ಥೆ ಅಥವಾ ಜಮೀನುದಾರ. . ಎಫೆ. 1:6, 12:ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
ಕೃತಜ್ಞತೆಯೂ ಪ್ರಾರ್ಥನೆಯೂ
೧೫ ಹೀಗಿರಲಾಗಿ § ಕೊಲೊ. 1:4; ಫಿಲೆ. 5:ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ, ೧೬  * ಕೊಲೊ. 1:9:ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ. ೧೭  ರೋಮಾ. 15:6:ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಕೊಲೊ. 1:9, 10:ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳುವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. ೧೮  § ಅ. ಕೃ. 26:18:ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು * ಎಫೆ. 3:8,16, 17; 1:7; ಕೊಲೊ. 1:27; ದೇವಜನರಲ್ಲಿರುವ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬುದನ್ನೂ, ೧೯ ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ. ೨೦ ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, ಎಫೆ. 4:10; ಕೊರಿ. 15:24; ಯೋಹಾ 3:31:ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ ೨೧ ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ಫಿಲಿ. 2:9 ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕೂರಿಸಿಕೊಂಡನು. ೨೨ ಇದಲ್ಲದೆ § ಕೀರ್ತ. 8:6; 1 ಕೊರಿ. 15:27 ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, * ಎಫೆ. 4:15; 5:23; ಕೊಲೊ. 1:18; 2:10,19.ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು. ೨೩  ಎಫೆ. 4:12,16; 5:30; ಕೊಲೊ. 1:18. 1 ಕೊರಿ. 12:27:ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅಥವಾ, ಅದು ಆತನನ್ನು ಪರಿಪೂರ್ಣ ಮಾಡುತ್ತದೆ; ಮತ್ತು ಆತನ ದೊರೆತನವು ಅದರ ಎಲ್ಲಾ ಭಾಗಗಳಲ್ಲಿ ಪರಿಪೂರ್ಣವಾಗಿದೆ. ಎಫೆ. 3:19; 4:10; ಕೊಲೊ. 3:11:ಅದು ಸಂಪೂರ್ಣತೆಯುಳ್ಳದ್ದಾಗಿದೆ.

*೧:೧ 1 ಕೊರಿ. 1:1 ನೋಡಿರಿ

೧:೧ ಕೊರಿ. 1:1 ನೋಡಿರಿ

೧:೧ ಕೆಲವು ಪ್ರತಿಗಳಲ್ಲಿ ಎಫೆಸದಲ್ಲಿರುವ ಎಂಬ ಪದ ಇಲ್ಲ; ಕೊಲೊ. 4:16 ನೋಡಿರಿ.

§೧:೧ ಕೊಲೊ 1:2:

*೧:೨ ರೋಮಾ. 1:7 ನೋಡಿರಿ.

೧:೩ ರೋಮಾ. 15:6 ನೋಡಿರಿ.

೧:೩ ಎಫೆ. 1:20; 2:6; 3:10:

§೧:೪ ಎಫೆ. 5:27; ಕೊಲೊ. 1:22; 1 ಥೆಸ. 4:7:

*೧:೪ ಎಫೆ. 2:10; 2 ಥೆಸ. 2:13; 1 ಪೇತ್ರ 1:2:

೧:೫ ಎಫೆ. 1:12,14:

೧:೫ ರೋಮಾ. 8 15:

§೧:೫ ಎಫೆ 1:9,11; ರೋಮಾ. 8:29,30.

*೧:೭ ಅ. ಕೃ. 20:28:

೧:೭ ಕೊಲೊ. 1:14; ಅ. ಕೃ. 2:38:

೧:೭ ರೋಮಾ. 3:24; 1 ಕೊರಿ. 1:30.

§೧:೮ ರೋಮಾ. 16:25:

*೧:೧೦ ಕೊಲೊ. 1:16, 20:

೧:೧೦ ಕ್ರಿಸ್ತನ ಅಧಿಪತ್ಯಕ್ಕೆ ಅಥವಾ ಪ್ರಭುತ್ವಕ್ಕೆ ಅಧೀನಪಡಿಸಬೇಕೆಂದಿದ್ದನು.

೧:೧೧ ಎಫೆ. 1:5; 3:11; ರೋಮ. 8:28:

§೧:೧೩ ಕೊಲೊ. 1:7:

*೧:೧೩ ಅ. ಕೃ. 1:4:

೧:೧೩ ಎಫೆ. 4:30.

೧:೧೪ 1 ಪೇತ್ರ. 2:9; ತೀತ. 2:14:

§೧:೧೪ ಕೆಲವು ಪ್ರತಿಗಳಲ್ಲಿ, ಪವಿತ್ರಾತ್ಮವರವು ನಮ್ಮ ಬಾಧ್ಯತೆಗೆ ಸಂಚಕಾರವಾಗಿದೆ ಎಂದು ಬರೆದಿದೆ.

*೧:೧೪ ಅ. ಕೃ. 20:32; ಎಫೆ. 1:18; 2 ಕೊರಿ. 1:22; ಎಫೆ. 4:30.

೧:೧೪ ಮುಂಚಿತವಾಗಿ ಕೊಟ್ಟ ಹಣ ಅಥವಾ ಕಳುಹಿಸಿದ ಸಹಾಯಕ, ಮುಂಚಿತವಾಗಿ ಗೊತ್ತುಮಾಡಿದ ವ್ಯವಸ್ಥೆ ಅಥವಾ ಜಮೀನುದಾರ.

೧:೧೪ ಎಫೆ. 1:6, 12:

§೧:೧೫ ಕೊಲೊ. 1:4; ಫಿಲೆ. 5:

*೧:೧೬ ಕೊಲೊ. 1:9:

೧:೧೭ ರೋಮಾ. 15:6:

೧:೧೭ ಕೊಲೊ. 1:9, 10:

§೧:೧೮ ಅ. ಕೃ. 26:18:

*೧:೧೮ ಎಫೆ. 3:8,16, 17; 1:7; ಕೊಲೊ. 1:27;

೧:೨೦ ಎಫೆ. 4:10; ಕೊರಿ. 15:24; ಯೋಹಾ 3:31:

೧:೨೧ ಫಿಲಿ. 2:9

§೧:೨೨ ಕೀರ್ತ. 8:6; 1 ಕೊರಿ. 15:27

*೧:೨೨ ಎಫೆ. 4:15; 5:23; ಕೊಲೊ. 1:18; 2:10,19.

೧:೨೩ ಎಫೆ. 4:12,16; 5:30; ಕೊಲೊ. 1:18. 1 ಕೊರಿ. 12:27:

೧:೨೩ ಅಥವಾ, ಅದು ಆತನನ್ನು ಪರಿಪೂರ್ಣ ಮಾಡುತ್ತದೆ; ಮತ್ತು ಆತನ ದೊರೆತನವು ಅದರ ಎಲ್ಲಾ ಭಾಗಗಳಲ್ಲಿ ಪರಿಪೂರ್ಣವಾಗಿದೆ. ಎಫೆ. 3:19; 4:10; ಕೊಲೊ. 3:11: