೧ ಹೀಗಿರಲಾಗಿ, ನನ್ನ ಪ್ರಿಯರೇ ಹಾಗೂ * ಫಿಲಿ. 1:8ಆಪ್ತರೇ, ನನಗೆ ಫಿಲಿ. 1:4, 2:16ಸಂತೋಷವೂ ಕಿರೀಟವೂ ಆಗಿರುವವರೇ, ನಾನು ಹೇಳಿದಂತೆ ಕರ್ತನಲ್ಲಿ ಫಿಲಿ. 1:27ದೃಢವಾಗಿ ನಿಲ್ಲಿರಿ, ಪ್ರಿಯರೇ.
ಉತ್ತೇಜನದ ಮಾತುಗಳು
೨ ಕರ್ತನಲ್ಲಿ § ಫಿಲಿ. 2:2ಒಂದೇ ಮನಸ್ಸುಳ್ಳವರಾಗಿರಿ ಎಂದು ಯುವೊದ್ಯಳನ್ನೂ ಹಾಗೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ. ೩ ನನ್ನ ನಿಜವಾದ ಜೊತೆ ಸೇವಕನೇ, ಆ ಸ್ತ್ರೀಯರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಜೊತೆ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು. * ಲೂಕ. 10:20ಅವರವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿವೆ.
೪  ಫಿಲಿ. 3:1ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ಪುನಃ ಹೇಳುತ್ತೇನೆ. ೫ ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ, 1 ಕೊರಿ. 16:23, ಯಾಕೋಬ. 5:8ಕರ್ತನು ಹತ್ತಿರವಾಗಿದ್ದಾನೆ. ೬  § ಮತ್ತಾ 6:25ಯಾವ ಸಂಬಂಧವಾಗಿಯೂ ಚಿಂತೆಮಾಡದೆ * ಜ್ಞಾ. 16:3ಸರ್ವವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ಕರ್ತನಿಗೆ ತಿಳಿಯಪಡಿಸಿರಿ. ೭  ಎಫೆ. 3:19ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ವ. 9, ಯೆಶಾ. 26:3, ಕೊಲೊ. 3:15, ಯೋಹಾ. 14:27ದಿವ್ಯಶಾಂತಿಯು ನಿಮ್ಮ ಹೃದಯಗಳನ್ನೂ, ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಪಾಡುವುದು.
೮ ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ. ೯  § 1 ಥೆಸ. 4:1ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ, ಮತ್ತು * ಫಿಲಿ. 3:17ಯಾವುದನ್ನು ನನ್ನಲ್ಲಿ ಕೇಳಿ ಕಂಡಿರುವಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಫಿಲಿ. 4:7, ರೋಮಾ. 15:33ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.
ಅವರು ದಾನಕ್ಕಾಗಿ ಕೃತಜ್ಞತೆ
೧೦  2 ಕೊರಿ. 11:9, ಫಿಲಿ. 2:30ನನ್ನ ವಿಷಯದಲ್ಲಿ ನಿಮಗಿರುವ ಕಾಳಜಿಯು ಇಷ್ಟು ದಿನಗಳಾದ ಮೇಲೆ ಪುನಃ ಚಿಗುರಿದಕ್ಕೆ ನಾನು ಕರ್ತನಲ್ಲಿ ಹೆಚ್ಚಾಗಿ ಸಂತೋಷಪಡುತ್ತೇನೆ. ಇಂಥ ಯೋಚನೆ ನಿಮ್ಮಲ್ಲಿ ಈ ಮೊದಲೇ ಇದ್ದಿದ್ದರೂ, ಸಹಾಯ ಮಾಡುವುದಕ್ಕೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ. ೧೧ ನನ್ನ ಅಗತ್ಯಗಳ ಕುರಿತಾಗಿ ನಾನು ಇದನ್ನು ಹೇಳುತ್ತಿಲ್ಲ, ನಾನಂತೂ ಇದ್ದ ಸ್ಥಿತಿಯಲ್ಲಿಯೇ § 1 ತಿಮೊ. 6:6-8, 2 ಕೊರಿ. 9:8, ಇಬ್ರಿ. 13:5ಸಂತೃಪ್ತನಾಗಿರುವುದನ್ನು ಕಲಿತುಕೊಂಡಿದ್ದೇನೆ. ೧೨ ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, * 1 ಕೊರಿ. 4:11, 2 ಕೊರಿ. 11:27ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ, 2 ಕೊರಿ. 11:9ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದಿದೆ. ೧೩  2 ಕೊರಿ. 12:9, ಎಫೆ. 3:16, 1 ತಿಮೊ. 1:12ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ. ೧೪ ಹೀಗಿದ್ದರೂ § ಫಿಲಿ. 1:7ನೀವು ನನ್ನ ಸಂಕಟದಲ್ಲಿ ಸಹಭಾಗಿಗಳಾಗಿದ್ದದ್ದು ಒಳ್ಳೆಯದಾಯಿತು. ೧೫ ಫಿಲಿಪ್ಪಿಯವರೇ, ನಾನು ಪ್ರಾರಂಭದಲ್ಲಿ ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ, ಮಕೆದೋನ್ಯದಿಂದ ಹೊರಟುಹೋದಾಗ * 2 ಕೊರಿ. 11:8-9ಕೊಡುವ, ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಯೂ ನನಗೆ ಬೆಂಬಲಿಸಲ್ಲಿಲ್ಲವೆಂಬುದನ್ನು ನೀವೂ ಬಲ್ಲಿರಿ. ೧೬ ನಾನು ಥೆಸಲೋನಿಕದಲ್ಲಿದ್ದಾಗಲೂ ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವುದಕ್ಕೆ ಸಹಾಯವನ್ನು ಕೊಟ್ಟುಕಳುಹಿಸಿದಿರಲ್ಲಾ. ೧೭  2 ಕೊರಿ. 9:5ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ರೋಮಾ. 1:13ನಿಮ್ಮ ಖಾತೆಯನ್ನು ವರ್ಧಿಸುವಂಥ ಸಮೃದ್ಧಿಯಾದ ಫಲವನ್ನೇ ಅಪೇಕ್ಷಿಸುತ್ತೇನೆ. ೧೮ ಬೇಕಾದದ್ದೆಲ್ಲಾ ನನಗುಂಟು, ಸಮೃದ್ಧಿಹೊಂದಿದ್ದೇನೆ. § ಫಿಲಿ. 2:25ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ * ಇಬ್ರಿ. 13:16ಮೆಚ್ಚಿಕೆಯಾದದ್ದು, ಆದಿ. 8:21ಸುಗಂಧವಾಸನೆಯೇ, ಇಷ್ಟ ಯಜ್ಞವೇ. ೧೯  ಕೀರ್ತ. 23:1, 2 ಕೊರಿ. 9:8ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ § ರೋಮಾ. 2:4, 9:23, 10:12, ಎಫೆ. 1:7,18, ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಗಳನ್ನೂ ನೀಗಿಸುವನು. ೨೦  * ಗಲಾ. 1:5, ರೋಮಾ. 11:36ನಮ್ಮ ತಂದೆಯಾದ ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯುಂಟಾಗಲಿ. ಆಮೆನ್‍.
ವಂದನೆಗಳು
೨೧ ಕ್ರಿಸ್ತ ಯೇಸುವಿನಲ್ಲಿರುವ ಪ್ರತಿಯೊಬ್ಬ ಭಕ್ತರಿಗೂ ನನ್ನ ವಂದನೆಯನ್ನು ಹೇಳಿರಿ. ಗಲಾ. 1:2ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ. ೨೨  2 ಕೊರಿ. 13:13ಇಲ್ಲಿರುವ ದೇವಜನರೆಲ್ಲರು ನಿಮ್ಮನ್ನು ವಂದಿಸುತ್ತಾರೆ. ವಿಶೇಷವಾಗಿ ಕೈಸರನ ಅರಮನೆಗೆ ಸೇರಿದವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ.
೨೩  § ರೋಮಾ. 16:20ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ.

*೪:೧ ಫಿಲಿ. 1:8

೪:೧ ಫಿಲಿ. 1:4, 2:16

೪:೧ ಫಿಲಿ. 1:27

§೪:೨ ಫಿಲಿ. 2:2

*೪:೩ ಲೂಕ. 10:20

೪:೪ ಫಿಲಿ. 3:1

೪:೫ 1 ಕೊರಿ. 16:23, ಯಾಕೋಬ. 5:8

§೪:೬ ಮತ್ತಾ 6:25

*೪:೬ ಜ್ಞಾ. 16:3

೪:೭ ಎಫೆ. 3:19

೪:೭ ವ. 9, ಯೆಶಾ. 26:3, ಕೊಲೊ. 3:15, ಯೋಹಾ. 14:27

§೪:೯ 1 ಥೆಸ. 4:1

*೪:೯ ಫಿಲಿ. 3:17

೪:೯ ಫಿಲಿ. 4:7, ರೋಮಾ. 15:33

೪:೧೦ 2 ಕೊರಿ. 11:9, ಫಿಲಿ. 2:30

§೪:೧೧ 1 ತಿಮೊ. 6:6-8, 2 ಕೊರಿ. 9:8, ಇಬ್ರಿ. 13:5

*೪:೧೨ 1 ಕೊರಿ. 4:11, 2 ಕೊರಿ. 11:27

೪:೧೨ 2 ಕೊರಿ. 11:9

೪:೧೩ 2 ಕೊರಿ. 12:9, ಎಫೆ. 3:16, 1 ತಿಮೊ. 1:12

§೪:೧೪ ಫಿಲಿ. 1:7

*೪:೧೫ 2 ಕೊರಿ. 11:8-9

೪:೧೭ 2 ಕೊರಿ. 9:5

೪:೧೭ ರೋಮಾ. 1:13

§೪:೧೮ ಫಿಲಿ. 2:25

*೪:೧೮ ಇಬ್ರಿ. 13:16

೪:೧೮ ಆದಿ. 8:21

೪:೧೯ ಕೀರ್ತ. 23:1, 2 ಕೊರಿ. 9:8

§೪:೧೯ ರೋಮಾ. 2:4, 9:23, 10:12, ಎಫೆ. 1:7,18,

*೪:೨೦ ಗಲಾ. 1:5, ರೋಮಾ. 11:36

೪:೨೧ ಗಲಾ. 1:2

೪:೨೨ 2 ಕೊರಿ. 13:13

§೪:೨೩ ರೋಮಾ. 16:20