Hebrews
ಇಬ್ರಿಯರಿಗೆ ಬರೆದ ಪತ್ರಿಕೆ
ದೇವರು ತನ್ನ ಮಗನ ಮೂಲಕ ಮಾತನಾಡಿದ್ದು
೧ ದೇವರು ಪುರಾತನ ಕಾಲದಲ್ಲಿ ನಮ್ಮ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ. ೨ ಆದರೆ * 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17:ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ಇಬ್ರಿ. 3:6; 4:14; 5:8:ಮಗನ ಮುಖಾಂತರ ಮಾತನಾಡಿದ್ದಾನೆ. ಕೀರ್ತ. 2:8; ಮತ್ತಾಯನು 21:38; 28:18:ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ § ಮೂಲ:ಯುಗಗಳನ್ನು. ಯೋಹಾ. 1:3:ಇಡೀ ವಿಶ್ವವನ್ನು ಉಂಟುಮಾಡಿದನು. ೩ ಈತನು ದೇವರ ಮಹಿಮೆಯ ಪ್ರಕಾಶವೂ, * 2 ಕೊರಿ. 4:4:ಆತನ ವ್ಯಕ್ತಿತ್ವದ ಪ್ರತಿರೂಪವೂ, ಇಬ್ರಿ. 11:3; ಕೊಲೊ. 1:17:ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಇಬ್ರಿ. 9:14:ಪಾಪಗಳನ್ನು ಶುದ್ಧೀಮಾಡಿ, § ಮಾರ್ಕ 16:19; ಲೂಕ 22:69:ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
ಯೇಸು ದೇವರ ಮಗನಾಗಿದ್ದು ದೇವದೂತರಿಗಿಂತಲೂ ಶ್ರೇಷ್ಠನು
೪ ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. * ಎಫೆ. 1:21; ಫಿಲಿ. 2:9:ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು. ೫ ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?,
ನೀನು ಕೀರ್ತ. 2:7; ಇಬ್ರಿ. 5:5; ಅ. ಕೃ. 13:33:ನನ್ನ ಮಗನು,
ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.
2 ಸಮು. 7:14; ಕೀರ್ತ. 89:26,27:ನಾನು ಅವನಿಗೆ ತಂದೆಯಾಗಿರುವೆನು,
ಅವನು ನನಗೆ ಮಗನಾಗಿರುವನು.
೬  § ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ. ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ
* ಧರ್ಮೋ. 32:43 [ಗ್ರೀಕ್ ಮೂಲ]. ಕೀರ್ತ. 97:7:ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು ಎಂದು ಆಜ್ಞಾಪಿಸಿದ್ದಾನೆ.
೭ ದೇವದೂತರ ವಿಷಯದಲ್ಲಿ,
ಕೀರ್ತ. 104:4:ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ,
ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ ಎಂದು ಹೇಳಿದ್ದಾನೆ.
೮ ಆದರೆ ಮಗನ ವಿಷಯದಲ್ಲಿಯಾದರೋ,
ದೇವರೇ ಕೀರ್ತ. 45:6,7:ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು.
ನೀತಿದಂಡವೇ ನಿನ್ನ ರಾಜದಂಡವಾಗಿದೆ.
೯ ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ.
ಆದುದರಿಂದ ದೇವರು, ನಿನ್ನ ದೇವರೇ,
ನಿನ್ನನ್ನು ನಿನ್ನ ಜೊತೆಗಾರರಿಗಿಂತ § ಯೆಶಾ. 61:1,3:ಅಧಿಕವಾದ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ ಎಂದು ಹೇಳಿದ್ದಾನೆ.
೧೦  * ಕೀರ್ತ. 102:25-27:ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ.
ಆಕಾಶವು ನಿನ್ನ ಕೈಕೆಲಸವಾಗಿದೆ,
೧೧ ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ.
ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.
೧೨ ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು
ಅವು ವಸ್ತ್ರದಂತೆ ಬದಲಾಗುವವು.
ಇಬ್ರಿ. 13:8:ನೀನಾದರೂ ಅನನ್ಯನು.
ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ ಎಂತಲೂ ಹೇಳುತ್ತಾನೆ.
೧೩ ಆದರೆ ಯಾವ ದೇವದೂತನಿಗಾದರೂ ದೇವರು,
ಕೀರ್ತ. 110:1; ಇಬ್ರಿ. 10:13:ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂಬುದಾಗಿ ಎಂದಾದರೂ ಹೇಳಿದ್ದಾನೋ?
೧೪ ಈ ಎಲ್ಲಾ ದೇವದೂತರು ರಕ್ಷಣೆಯನ್ನು § ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ. 21:7:ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ * ಆದಿ. 19:16; ನ್ಯಾಯ. 6:11; ದಾನಿ. 3:28; ಅ. ಕೃ. 12:7:ಸೇವಕಾತ್ಮಗಳಲ್ಲವೋ?

*೧:೨ 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17:

೧:೨ ಇಬ್ರಿ. 3:6; 4:14; 5:8:

೧:೨ ಕೀರ್ತ. 2:8; ಮತ್ತಾಯನು 21:38; 28:18:

§೧:೨ ಮೂಲ:ಯುಗಗಳನ್ನು. ಯೋಹಾ. 1:3:

*೧:೩ 2 ಕೊರಿ. 4:4:

೧:೩ ಇಬ್ರಿ. 11:3; ಕೊಲೊ. 1:17:

೧:೩ ಇಬ್ರಿ. 9:14:

§೧:೩ ಮಾರ್ಕ 16:19; ಲೂಕ 22:69:

*೧:೪ ಎಫೆ. 1:21; ಫಿಲಿ. 2:9:

೧:೫ ಕೀರ್ತ. 2:7; ಇಬ್ರಿ. 5:5; ಅ. ಕೃ. 13:33:

೧:೫ 2 ಸಮು. 7:14; ಕೀರ್ತ. 89:26,27:

§೧:೬ ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ.

*೧:೬ ಧರ್ಮೋ. 32:43 [ಗ್ರೀಕ್ ಮೂಲ]. ಕೀರ್ತ. 97:7:

೧:೭ ಕೀರ್ತ. 104:4:

೧:೮ ಕೀರ್ತ. 45:6,7:

§೧:೯ ಯೆಶಾ. 61:1,3:

*೧:೧೦ ಕೀರ್ತ. 102:25-27:

೧:೧೨ ಇಬ್ರಿ. 13:8:

೧:೧೩ ಕೀರ್ತ. 110:1; ಇಬ್ರಿ. 10:13:

§೧:೧೪ ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ. 21:7:

*೧:೧೪ ಆದಿ. 19:16; ನ್ಯಾಯ. 6:11; ದಾನಿ. 3:28; ಅ. ಕೃ. 12:7: