೨
ಅಧರ್ಮ ಪುರುಷನು
೧ ಸಹೋದರರೇ, ನಮ್ಮ ಕರ್ತನಾದ * 1 ಥೆಸ. 2:19:ಯೇಸು ಕ್ರಿಸ್ತನ ಆಗಮನದ ವಿಷಯವಾಗಿಯೂ ಮತ್ತು † ಮತ್ತಾ 24:31; 1 ಥೆಸ. 4:15-17:ನಾವು ಆತನ ಎದುರಿನಲ್ಲಿ ಕೂಡಿಕೊಳ್ಳುವುದರ ವಿಷಯವಾಗಿಯೂ ನಿಮ್ಮನ್ನು ವಿನಂತಿಸುವುದೇನಂದರೆ, ೨ ಕರ್ತನ ಆಗಮನದ ದಿನವು ಈಗಾಗಲೇ ಬಂದಿದೆಯೆಂಬುದಾಗಿ ‡ 1 ಯೋಹಾ. 4:1:ಆತ್ಮದಿಂದಾಗಲಿ § ವ. 15:ಮಾತಿನಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ನೀವು ಬೇಗನೆ ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ.
೩ ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ * 1 ತಿಮೊ. 4:1:ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ † ವ. 8; ದಾನಿ. 7:25; 8:25; 11:36; ಪ್ರಕ. 13:5, 6. ವಿಧ್ವಂಸಕನುನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ. ೪ ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ‡ ಯೋಹಾ. 17:12:ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು § ಯೆಶಾ. 14:14; ಯೆಜೆ. 28:2:ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.
೫ ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ? ೬ ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ. ೭ * 1 ಯೋಹಾ. 2:18; 4:3:ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು. ೮ ಆಗ † ವ. 3:ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು ‡ ಯೆಶಾ. 11:4:ತನ್ನ ಬಾಯಿಯ ಉಸಿರಿನಿಂದ § ದಾನಿ. 7:10, 11:ಕೊಲ್ಲುವನು, * 1 ತಿಮೊ. 6:14; 2 ತಿಮೊ. 1:10; 4:1, 8; ತೀತ. 2:13:ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು. ೯ ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ † ಮತ್ತಾ 24:24; ಪ್ರಕ. 13:14:ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ, ೧೦ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ‡ 1 ಕೊರಿ. 1:18:ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ. ೧೧ ಇದೇ ಕಾರಣದಿಂದ § 1 ಅರಸು 22:22; ಯೆಹೆ. 14:9:ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು * ರೋಮಾ. 1:25:ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ. ೧೨ † ರೋಮಾ. 1:32; 2:8:ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ ‡ ಅಥವಾ, ಒಳಗಾಗಬೇಕೆಂಬುದೇ ದೇವರ ಉದ್ದೇಶ. ಗುರಿಯಾಗುವರು.
ದೃಢವಾಗಿ ನಿಲ್ಲಿರಿ
೧೩ § 1 ಥೆಸ. 1:4:ಕರ್ತನಿಗೆ ಪ್ರಿಯರಾಗಿರುವ ಸಹೋದರರೇ, * 1 ಥೆಸ. 4:3:ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ, ಸತ್ಯದ ಮೇಲೆ ನಂಬಿಕೆಯನ್ನಿಟ್ಟು, † 1 ಥೆಸ. 5:9; 2 ತಿಮೊ. 1:9:ರಕ್ಷಣೆಯನ್ನು ಪಡೆಯುವುದಕ್ಕಾಗಿ ದೇವರು ನಿಮ್ಮನ್ನು ‡ ಕೆಲವು ಪ್ರತಿಗಳಲ್ಲಿ, ಪ್ರಥಮಫಲವಾಗಿ ಎಂದು ಬರೆದದೆ. ಆದಿಯಿಂದ ಆರಿಸಿಕೊಂಡಿದ್ದರಿಂದ ನಾವು § 1 ಥೆಸ. 1:3:ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವುದಕ್ಕೆ ಬದ್ಧರಾಗಿದ್ದೇವೆ. ೧೪ ನೀವು ಹೀಗೆ * 1 ಥೆಸ. 5:9; 2 ತಿಮೊ. 1:9:ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು. ೧೫ ಹೀಗಿರುವುದರಿಂದ ಸಹೋದರರೇ, † 1 ಕೊರಿ. 16:13:ದೃಢವಾಗಿ ನಿಲ್ಲಿರಿ. ‡ ವ. 2:ನಾವು ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ನಿಮಗೆ ಬೋಧಿಸಿದ ಸಂಪ್ರದಾಯಗಳನ್ನು ಭದ್ರವಾಗಿ ಹಿಡಿದುಕೊಂಡಿರಿ. ೧೬ ಮತ್ತು § ಯೋಹಾ 3:16; 1 ಯೋಹಾ. 4:10; ಪ್ರಕ. 1:5 ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ * 1 ಪೇತ್ರ. 1:3:ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ತಾನೇ ನಿಮ್ಮ ಹೃದಯಗಳನ್ನು ಸಂತೈಸಿ, ೧೭ ಸಕಲ ಸತ್ಕಾರ್ಯದಲ್ಲಿಯೂ, ಸದ್ವಾಕ್ಯದಲ್ಲಿಯೂ † 1 ಥೆಸ. 3:13; 2 ಥೆಸ. 3:3:ದೃಢಪಡಿಸಲಿ.
*೨:೧ 1 ಥೆಸ. 2:19:
†೨:೧ ಮತ್ತಾ 24:31; 1 ಥೆಸ. 4:15-17:
§೨:೨ ವ. 15:
*೨:೩ 1 ತಿಮೊ. 4:1:
†೨:೩ ವ. 8; ದಾನಿ. 7:25; 8:25; 11:36; ಪ್ರಕ. 13:5, 6. ವಿಧ್ವಂಸಕನು
§೨:೪ ಯೆಶಾ. 14:14; ಯೆಜೆ. 28:2:
*೨:೭ 1 ಯೋಹಾ. 2:18; 4:3:
†೨:೮ ವ. 3:
§೨:೮ ದಾನಿ. 7:10, 11:
*೨:೮ 1 ತಿಮೊ. 6:14; 2 ತಿಮೊ. 1:10; 4:1, 8; ತೀತ. 2:13:
†೨:೯ ಮತ್ತಾ 24:24; ಪ್ರಕ. 13:14:
§೨:೧೧ 1 ಅರಸು 22:22; ಯೆಹೆ. 14:9:
*೨:೧೧ ರೋಮಾ. 1:25:
†೨:೧೨ ರೋಮಾ. 1:32; 2:8:
‡೨:೧೨ ಅಥವಾ, ಒಳಗಾಗಬೇಕೆಂಬುದೇ ದೇವರ ಉದ್ದೇಶ.
§೨:೧೩ 1 ಥೆಸ. 1:4:
*೨:೧೩ 1 ಥೆಸ. 4:3:
†೨:೧೩ 1 ಥೆಸ. 5:9; 2 ತಿಮೊ. 1:9:
‡೨:೧೩ ಕೆಲವು ಪ್ರತಿಗಳಲ್ಲಿ, ಪ್ರಥಮಫಲವಾಗಿ ಎಂದು ಬರೆದದೆ.
§೨:೧೩ 1 ಥೆಸ. 1:3:
*೨:೧೪ 1 ಥೆಸ. 5:9; 2 ತಿಮೊ. 1:9:
‡೨:೧೫ ವ. 2:
§೨:೧೬ ಯೋಹಾ 3:16; 1 ಯೋಹಾ. 4:10; ಪ್ರಕ. 1:5
*೨:೧೬ 1 ಪೇತ್ರ. 1:3:
†೨:೧೭ 1 ಥೆಸ. 3:13; 2 ಥೆಸ. 3:3: