೩
ಪ್ರಾರ್ಥನೆಗಾಗಿ ವಿನಂತಿ
೧ ಕಡೆಯದಾಗಿ, * 1 ಥೆಸ. 5:25:ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ † ಕೀರ್ತ. 147:15; 1 ಥೆಸ. 1:8:ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ, ೨ ‡ ರೋಮಾ. 15:31:ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ. ೩ ಆದರೆ § 1 ಕೊರಿ. 1:9:ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು * 1 ಯೋಹಾ. 2:14:ಕೆಡುಕನ ಕೈಗೆ † ಮತ್ತಾ 6:13; ಯೋಹಾ. 17:15:ಸಿಕ್ಕದಂತೆ ಕಾಪಾಡುವನು. ೪ ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು. ೫ ನೀವು ದೇವರ ಪ್ರೀತಿಯಲ್ಲಿಯೂ ‡ ಅಥವಾ, ಕ್ರಿಸ್ತನನ್ನು ಎದುರುನೋಡುವ. ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡಿಸಲಿ.
ಮೈಗಳ್ಳರಿಗೆ ಎಚ್ಚರಿಕೆ
೬ ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ § ವ. 11; 1 ಥೆಸ. 5:14:ಸೋಮಾರಿಯಾಗಿ ನಡೆಯುವ ಪ್ರತಿ * 1 ಕೊರಿ. 5:11:ಸಹೋದರನಿಗೆ ನೀವು † ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ. 5:9; 2 ಯೋಹಾ. 10:ದೂರವಾಗಿರಬೇಕೆಂದು ‡ 1 ಕೊರಿ. 5:4:ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ. ೭ § ಅ. ಕೃ. 20:35; 1 ಥೆಸ. 1:6:ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, * 1 ಥೆಸ. 1:5 ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ. ೮ ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, † 1 ಥೆಸ. 2:9:ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು. ೯ ‡ 1 ಕೊರಿ. 9:4; 1 ಥೆಸ. 2:6:ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, § ವ. 7; 1 ಪೇತ್ರ. 5:3:ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು. ೧೦ ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, * ಆದಿ. 3:19; 1 ಥೆಸ. 4:11:ಕೆಲಸ ಮಾಡಲೊಲ್ಲದವನು ಊಟಮಾಡಬಾರ ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ. ೧೧ ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, † 1 ತಿಮೊ. 5:13; 1 ಪೇತ್ರ. 4:15:ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ. ೧೨ ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ. ೧೩ ಸಹೋದರರೇ, ‡ ಗಲಾ. 6:9; 1 ಕೊರಿ. 15:58:ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ. ೧೪ ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ § ವ. 6:ಅವನ ಸಹವಾಸದಲ್ಲಿ ಸೇರಬೇಡಿರಿ. ೧೫ ಆದರೂ * ಯಾಜಕ. 19:17; ಮತ್ತಾ 18:15:ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.
ಸಮಾಪ್ತಿ ವಾಕ್ಯಗಳು
೧೬ † ರೋಮಾ. 15:33:ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ ‡ ಅರಣ್ಯ. 6:26:ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.
೧೭ § 1 ಕೊರಿ. 16:21:ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.
೧೮ * ರೋಮಾ. 16:20:ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.
*೩:೧ 1 ಥೆಸ. 5:25:
†೩:೧ ಕೀರ್ತ. 147:15; 1 ಥೆಸ. 1:8:
‡೩:೨ ರೋಮಾ. 15:31:
*೩:೩ 1 ಯೋಹಾ. 2:14:
†೩:೩ ಮತ್ತಾ 6:13; ಯೋಹಾ. 17:15:
‡೩:೫ ಅಥವಾ, ಕ್ರಿಸ್ತನನ್ನು ಎದುರುನೋಡುವ.
§೩:೬ ವ. 11; 1 ಥೆಸ. 5:14:
†೩:೬ ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ. 5:9; 2 ಯೋಹಾ. 10:
§೩:೭ ಅ. ಕೃ. 20:35; 1 ಥೆಸ. 1:6:
*೩:೭ 1 ಥೆಸ. 1:5
†೩:೮ 1 ಥೆಸ. 2:9:
‡೩:೯ 1 ಕೊರಿ. 9:4; 1 ಥೆಸ. 2:6:
§೩:೯ ವ. 7; 1 ಪೇತ್ರ. 5:3:
†೩:೧೧ 1 ತಿಮೊ. 5:13; 1 ಪೇತ್ರ. 4:15:
‡೩:೧೩ ಗಲಾ. 6:9; 1 ಕೊರಿ. 15:58:
§೩:೧೪ ವ. 6:
*೩:೧೫ ಯಾಜಕ. 19:17; ಮತ್ತಾ 18:15:
†೩:೧೬ ರೋಮಾ. 15:33:
‡೩:೧೬ ಅರಣ್ಯ. 6:26:
*೩:೧೮ ರೋಮಾ. 16:20: