1 Thessalonians
ಪೌಲನು ಥೆಸಲೋನಿಕದವರಿಗೆ ಬರೆದ ಮೊದಲನೆಯ ಪತ್ರಿಕೆ
ಪೀಠಿಕೆ
೧ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ * ಅ. ಕೃ. 17:1:ಥೆಸಲೋನಿಕದ ಸಭೆಗೆ ಪೌಲ ಅ. ಕೃ. 15:22; 2 ಕೊರಿ. 1:19; 2 ಥೆಸ. 1:1; 1 ಪೇತ್ರ 5:12:ಸಿಲ್ವಾನ, ತಿಮೊಥೆಯ ಎಂಬ ನಾವು ಬರೆಯುವುದೇನಂದರೆ, ರೋಮಾ. 1:7; ಎಫೆ. 1:2:ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.
ಪೌಲನು ಥೆಸಲೋನಿಕದವರ ನಂಬಿಕೆಗಾಗಿ ದೇವರಿಗೆ ಮಾಡಿದ ಕೃತಜ್ಞತಾಸ್ತುತಿ
೨-೩ ನಾವು § 2 ಥೆಸ. 1:11; ಯೋಹಾ 6:29; ಗಲಾ. 5:6; ಯಾಕೋಬ 2:22:ನಂಬಿಕೆಯ ಫಲವಾದ ನಿಮ್ಮ ಕಾರ್ಯವನ್ನೂ, * 2 ಥೆಸ. 1:3:ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಿನ ನೀವಿಟ್ಟಿರುವ ಅಚಲವಾದ ರೋಮಾ. 8:25; 15:4:ನಿರೀಕ್ಷೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕ ಮಾಡಿಕೊಂಡು, ರೋಮಾ. 1:9; 2 ತಿಮೊ. 1:6:ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ. ೪  § 2 ಥೆಸ. 2:15:ದೇವರಿಂದ ಪ್ರೀತಿಸಲ್ಪಟ್ಟಿರುವ ಸಹೋದರರೇ, * 2 ಪೇತ್ರ 1:10:ಆತನು ನಿಮ್ಮನ್ನು ಆರಿಸಿಕೊಂಡನೆಂಬದನ್ನೂ ಬಲ್ಲೆವು. ೫ ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ 2 ಕೊರಿ. 6:6; 1 ಕೊರಿ. 2:4:ಪವಿತ್ರಾತ್ಮದೊಡನೆಯೂ ಮತ್ತು ಸಿದ್ಧಿಪೂರ್ವಕವಾಗಿಯೂ. ಕೊಲೊ. 2:2:ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ § 1 ಥೆಸ. 2:10; 2 ಥೆಸ. 3:7; ಅ. ಕೃ. 20:18:ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ. ೬ ಇದಲ್ಲದೆ * ಅ. ಕೃ. 17:5-10:ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಅ. ಕೃ. 13:52; ಗಲಾ. 5:22:ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, 1 ಥೆಸ. 2:14; 2 ಥೆಸ. 3:7, 9; 1 ಕೊರಿ. 4:16; 11:1:ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ. ೭ ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ.
೮ ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ § ರೋಮಾ. 10:18; 2 ಥೆಸ. 3:1:ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು * ರೋಮಾ. 1:8; 16:19; 2 ಥೆಸ. 1:4:ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ. ೯ ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು 1 ಕೊರಿ. 12:2; ಅ. ಕೃ. 14:15:ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ ೧೦ ಮತ್ತು ಆತನು ಅ. ಕೃ. 2:24:ಸತ್ತವರೊಳಗಿಂದ ಎಬ್ಬಿಸಿದ, ಆಕಾಶದೊಳಗಿಂದ ಬರಲಿಕ್ಕಿರುವಂಥ ಆತನ ಕುಮಾರನನ್ನು ಕಾದುಕುಳಿತಿರುವಿರೆಂತಲೂ ಆ ಜನರೇ ಹೇಳುತ್ತಾರೆ. ಈ ಯೇಸು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು.

*೧:೧ ಅ. ಕೃ. 17:1:

೧:೧ ಅ. ಕೃ. 15:22; 2 ಕೊರಿ. 1:19; 2 ಥೆಸ. 1:1; 1 ಪೇತ್ರ 5:12:

೧:೧ ರೋಮಾ. 1:7; ಎಫೆ. 1:2:

§೧:೨-೩ 2 ಥೆಸ. 1:11; ಯೋಹಾ 6:29; ಗಲಾ. 5:6; ಯಾಕೋಬ 2:22:

*೧:೨-೩ 2 ಥೆಸ. 1:3:

೧:೨-೩ ರೋಮಾ. 8:25; 15:4:

೧:೨-೩ ರೋಮಾ. 1:9; 2 ತಿಮೊ. 1:6:

§೧:೪ 2 ಥೆಸ. 2:15:

*೧:೪ 2 ಪೇತ್ರ 1:10:

೧:೫ 2 ಕೊರಿ. 6:6; 1 ಕೊರಿ. 2:4:

೧:೫ ಸಿದ್ಧಿಪೂರ್ವಕವಾಗಿಯೂ. ಕೊಲೊ. 2:2:

§೧:೫ 1 ಥೆಸ. 2:10; 2 ಥೆಸ. 3:7; ಅ. ಕೃ. 20:18:

*೧:೬ ಅ. ಕೃ. 17:5-10:

೧:೬ ಅ. ಕೃ. 13:52; ಗಲಾ. 5:22:

೧:೬ 1 ಥೆಸ. 2:14; 2 ಥೆಸ. 3:7, 9; 1 ಕೊರಿ. 4:16; 11:1:

§೧:೮ ರೋಮಾ. 10:18; 2 ಥೆಸ. 3:1:

*೧:೮ ರೋಮಾ. 1:8; 16:19; 2 ಥೆಸ. 1:4:

೧:೯ 1 ಕೊರಿ. 12:2; ಅ. ಕೃ. 14:15:

೧:೧೦ ಅ. ಕೃ. 2:24: