೧೨
ಘಟಸರ್ಪ ಮತ್ತು ಸ್ತ್ರೀ
೧ ಪರಲೋಕದಲ್ಲಿ ಒಂದು ಮಹಾ ಚಿಹ್ನೆಯು ಕಾಣಿಸಿತು. ಸ್ತ್ರೀಯೊಬ್ಬಳು * ಕೀರ್ತ. 104:2; ಪರಮ. 6:10:ಸೂರ್ಯಭೂಶಿತಳಾಗಿದ್ದಳು. ಆಕೆಯ ಪಾದದಡಿಯಲ್ಲಿ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳಿಂದ ಮಾಡಿದ್ದ ಒಂದು ಕಿರೀಟವಿತ್ತು. ೨  ಯೆಶಾ. 66:7-10; ಮೀಕ. 4:10; ಮತ್ತಾ 24:8; ಯೋಹಾ. 16:21:ಆಕೆಯು ಗರ್ಭಿಣಿಯಾಗಿದ್ದು ಹೆರುವುದಕ್ಕೆ ಪ್ರಸವವೇದನೆಯಿಂದ ನರಳುತ್ತಾ ಅಳುತ್ತಿದ್ದಳು. ೩ ಪರಲೋಕದಲ್ಲಿ ಮತ್ತೊಂದು ಚಿಹ್ನೆಯು ಕಾಣಿಸಿತು. ಅಲ್ಲಿ ಯೆಶಾ. 27:1; ಪ್ರಕ. 17:3:ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ § ಪ್ರಕ. 13:1; 17:9, 12:ಏಳು ತಲೆಗಳೂ * ದಾನಿ. 7:7:ಹತ್ತು ಕೊಂಬುಗಳು ಇದ್ದವು. ಅದರ ತಲೆಗಳ ಮೇಲೆ ಪ್ರಕ. 19:12:ಏಳು ಕಿರೀಟಗಳು ಇದ್ದವು. ೪ ಅದು ತನ್ನ ಬಾಲದಿಂದ ಪ್ರಕ. 8:7:ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು § ದಾನಿ. 8:10:ಭೂಮಿಗೆ ಎಸೆಯಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ * ಮತ್ತಾ 2:16:ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಆಕೆಯ ಮುಂದೆ ನಿಂತುಕೊಂಡಿತ್ತು. ೫ ಆಕೆ ಮತ್ತಾ 2:6; ಪ್ರಕ. 2:27:ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ಪಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು. ೬ ಮತ್ತು ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಆಕೆಗೆ ಪ್ರಕ. 11:2, 3; 13:5:ಸಾವಿರದ ಇನ್ನೂರ ಅರವತ್ತು ದಿನಗಳ ವರೆಗೆ ಪೋಷಣೆಮಾಡುವುದಕ್ಕಾಗಿ ದೇವರು ಸಿದ್ಧಮಾಡಿದ್ದ ಸ್ಥಳವನ್ನು ಅವಳು ಕಂಡಳು.
೭ ಪರಲೋಕದಲ್ಲಿ ಯುದ್ಧ ನಡೆಯಿತು. § ಯೂದ. 9:ಮೀಕಾಯೆಲನೂ ಅವನ ದೂತರೂ ಘಟಸರ್ಪದ ವಿರುದ್ಧ ಯುದ್ಧ ಮಾಡಿದರು. ಘಟಸರ್ಪವೂ * ಮತ್ತಾ 25:41; 2 ಪೇತ್ರ. 2:4; ಯೂದ 6:ಅವನ ದೂತರೂ ಯುದ್ಧ ಮಾಡಿ ಕಾದಾಡಿದರು. ೮ ಆದರೆ ಘಟಸರ್ಪಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ ಅದು ಸೋಲನ್ನಪ್ಪಿತು. ಹೀಗೆ ಪರಲೋಕದಲ್ಲಿ ಅವರಿಗೂ ಸ್ಥಳವಿಲ್ಲದಂತಾಯಿತು. ೯  ಪ್ರಕ. 20:3, 10; 13:14; ಯೋಹಾ 8:44:ಭೂಲೋಕದವರನ್ನೆಲ್ಲಾ ಮರುಳುಗೊಳಿಸಿ ಪಾಪ ಮಾಡಿಸುತ್ತಿದ್ದ ಆ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಆ ಆದಿ. 3:1; ಪ್ರಕ. 20:2:ಪುರಾತನ ಸರ್ಪವನ್ನು § ಲೂಕ 10:18; ಯೊಹಾ. 12:31:ಭೂಮಿಗೆ ತಳ್ಳಲಾಯಿತು. ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು.
೧೦ ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, ಈಗ ನಮ್ಮ ದೇವರ * ಅಥವಾ ಜಯವೂ. ಪ್ರಕ. 7:10; 19:1:ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತಾಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ ಯೋಬ. 1:9; 2:5; ಜೆಕ. 3:1:ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. ೧೧ ಅವರು ಪ್ರಕ. 2:10:ಮರಣದವರೆಗೆ ತಮ್ಮ § ಲೂಕ. 14:26; ಯೋಹಾ. 12:25:ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ * ಪ್ರಕ. 15:2; ಯೋಹಾ. 16:33; ರೋಮಾ. 8:37; 16:20:ಅವನನ್ನು ಜಯಿಸಿದರು. ೧೨ ಆದ್ದರಿಂದ ಕೀರ್ತ. 96:11; ಯೆಶಾ. 44:23; 49:13; ಪ್ರಕ. 18:20:ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಆದರೆ ಪ್ರಕ. 8:13:ಭೂಮಿ, ಸಮುದ್ರಗಳೇ ನಿಮ್ಮ ದುರ್ಗತಿಯನ್ನು ಏನೆಂದು ಹೇಳಲಿ ಏಕೆಂದರೆ ಸೈತಾನನು § ಮತ್ತಾ 8:29; ಪ್ರಕ. 10:6:ತನಗಿರುವ ಕಾಲವು ಇನ್ನು ಸ್ವಲ್ಪಮಾತ್ರವೆಂದು ತಿಳಿದು ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ ಎಂಬುದಾಗಿ ಹೇಳಿತು.
೧೩ ಘಟಸರ್ಪನು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವುದನ್ನು ಗ್ರಹಿಸಿಕೊಂಡು, * ವ. 5:ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸುವುದಕ್ಕೆ ಅಟ್ಟಿಸಿಕೊಂಡು ಹೋಯಿತು. ೧೪ ಆದರೆ ಆ ಸ್ತ್ರೀಯು ವ. 6:ಮರುಭೂಮಿಯಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ವಿಮೋ. 19:4:ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು. ಅಲ್ಲಿ ಆಕೆಯು ಒಂದು ಕಾಲ, ಕಾಲಗಳು, ಅರ್ಧ ಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು. ೧೫ ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಸುರಿಸಿದನು. ೧೬ ಆದರೆ ಭೂಮಿಯು ಆ ಸ್ತ್ರೀಗೆ ಸಹಾಯಮಾಡಿತು. ಅದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತ್ತು. ೧೭ ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, § ಆದಿ. 3:15:ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, * ಪ್ರಕ. 14:12; 1 ಯೋಹಾ 2:3:ದೇವರ ಆಜ್ಞೆಗಳನ್ನು ಕೈಗೊಂಡು ನಡೆದು ಪ್ರಕ. 1:2; 6:9; 19:10:ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ ಪ್ರಕ. 11:7; 13:7:ಯುದ್ಧಮಾಡುವುದಕ್ಕೆ ಹೊರಟು, ೧೮ ಸಮುದ್ರ ತೀರದ ಮರಳಿನ ಮೇಲೆ ನಿಂತನು.

*೧೨:೧ ಕೀರ್ತ. 104:2; ಪರಮ. 6:10:

೧೨:೨ ಯೆಶಾ. 66:7-10; ಮೀಕ. 4:10; ಮತ್ತಾ 24:8; ಯೋಹಾ. 16:21:

೧೨:೩ ಯೆಶಾ. 27:1; ಪ್ರಕ. 17:3:

§೧೨:೩ ಪ್ರಕ. 13:1; 17:9, 12:

*೧೨:೩ ದಾನಿ. 7:7:

೧೨:೩ ಪ್ರಕ. 19:12:

೧೨:೪ ಪ್ರಕ. 8:7:

§೧೨:೪ ದಾನಿ. 8:10:

*೧೨:೪ ಮತ್ತಾ 2:16:

೧೨:೫ ಮತ್ತಾ 2:6; ಪ್ರಕ. 2:27:

೧೨:೬ ಪ್ರಕ. 11:2, 3; 13:5:

§೧೨:೭ ಯೂದ. 9:

*೧೨:೭ ಮತ್ತಾ 25:41; 2 ಪೇತ್ರ. 2:4; ಯೂದ 6:

೧೨:೯ ಪ್ರಕ. 20:3, 10; 13:14; ಯೋಹಾ 8:44:

೧೨:೯ ಆದಿ. 3:1; ಪ್ರಕ. 20:2:

§೧೨:೯ ಲೂಕ 10:18; ಯೊಹಾ. 12:31:

*೧೨:೧೦ ಅಥವಾ ಜಯವೂ. ಪ್ರಕ. 7:10; 19:1:

೧೨:೧೦ ಯೋಬ. 1:9; 2:5; ಜೆಕ. 3:1:

೧೨:೧೧ ಪ್ರಕ. 2:10:

§೧೨:೧೧ ಲೂಕ. 14:26; ಯೋಹಾ. 12:25:

*೧೨:೧೧ ಪ್ರಕ. 15:2; ಯೋಹಾ. 16:33; ರೋಮಾ. 8:37; 16:20:

೧೨:೧೨ ಕೀರ್ತ. 96:11; ಯೆಶಾ. 44:23; 49:13; ಪ್ರಕ. 18:20:

೧೨:೧೨ ಪ್ರಕ. 8:13:

§೧೨:೧೨ ಮತ್ತಾ 8:29; ಪ್ರಕ. 10:6:

*೧೨:೧೩ ವ. 5:

೧೨:೧೪ ವ. 6:

೧೨:೧೪ ವಿಮೋ. 19:4:

§೧೨:೧೭ ಆದಿ. 3:15:

*೧೨:೧೭ ಪ್ರಕ. 14:12; 1 ಯೋಹಾ 2:3:

೧೨:೧೭ ಪ್ರಕ. 1:2; 6:9; 19:10:

೧೨:೧೭ ಪ್ರಕ. 11:7; 13:7: