೫
೧ ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ * ಇಬ್ರಿ. 2:17:ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ † ಇಬ್ರಿ. 8:3:ನೇಮಿಸಲಾಗಿದ್ದು. ‡ ಇಬ್ರಿ. 8:3, 4; 9:9; 10:11:ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು. ೨ § ಇಬ್ರಿ. 7:28:ತಾನೂ ಸಹ ಬಲಹೀನನಾಗಿರುವುದರಿಂದ * ಇಬ್ರಿ. 2:18; 4:15:ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು. ೩ ಆದ್ದರಿಂದ, † ಯಾಜ. 4:3; 9:7; 16:6; ಇಬ್ರಿ. 7:27; 9:7:ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು. ೪ ‡ ಅರಣ್ಯ. 16:5, 40; 18:7; 2 ಪೂರ್ವ. 26:18:ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ § ವಿಮೋ. 28:1; 1 ಪೂರ್ವ. 23:13:ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ.
೫ * ಯೋಹಾ 8:54:ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ
† ಇಬ್ರಿ. 1:5 ನೀನು ನನ್ನ ಮಗನು,
ಈ ಹೊತ್ತು ನಾನು ನಿನಗೆ ತಂದೆಯಾದೆನು ಎಂದು ದೇವರೇ ಹೇಳಿದನು.
೬ ಆತನು ಇನ್ನೊಂದು ಕಡೆಯಲ್ಲಿ,
ನೀನು ‡ ಕೀರ್ತ. 110:4; ಇಬ್ರಿ. 7:17, 21:ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು ಎಂದು ಹೇಳುತ್ತಾನೆ.
೭ ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, § ಮಾರ್ಕ 14:36:ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ * ಕೀರ್ತ. 22:1, 2; ಮತ್ತಾ 27:46, 50; ಮಾರ್ಕ. 15:34, 37; ಲೂಕ. 23:46:ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, † ಮತ್ತಾ 26:39, 44; ಮಾರ್ಕ. 14:36, 39; ಲೂಕ 22:41, 44:ಪ್ರಾರ್ಥನೆ ವಿಜ್ಞಾಪನೆಗಳನ್ನು ‡ ಅಥವಾ, ಸಮರ್ಪಿಸಿ ಕೇಳಲ್ಪಟ್ಟು ಭಯದಿಂದ ಬಿಡುಗಡೆ ಹೊಂದಿದನು. ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು. ೮ ಹೀಗೆ § ಇಬ್ರಿ. 1:2:ಆತನು ಮಗನಾಗಿದ್ದರೂ ತಾನು * ಫಿಲಿ. 2:8:ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ೯ ಇದಲ್ಲದೆ † ಇಬ್ರಿ. 2:10:ಆತನು ಪರಿಪೂರ್ಣಗೊಳಿಸಿ, ತನಗೆ ವಿಧೇಯರಾಗಿರುವ ಎಲ್ಲರಿಗೂ ‡ ಯೆಶಾ. 45:17:ನಿತ್ಯ ರಕ್ಷಣೆಗೆ ಕಾರಣನಾದನು. ೧೦ ಅಲ್ಲದೆ ಆತನು § ಇಬ್ರಿ. 5:6; 6:20:ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ದೇವರಿಂದ ನೇಮಿಸಲ್ಪಟ್ಟನು.
ನಂಬಿಕೆಯನ್ನು ತ್ಯಜಿಸುವುದರ ಕುರಿತು ಎಚ್ಚರಿಕೆ
೧೧ ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟವಾಗಿದೆ. ೧೨ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ * ಇಬ್ರಿ. 6:1:ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ † 1 ಕೊರಿ. 3:2:ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ. ೧೩ ಹಾಲು ಕುಡಿಯುವವನು ‡ 1 ಕೊರಿ. 3:1:ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ. ೧೪ ಗಟ್ಟಿಯಾದ ಆಹಾರವು § ಎಫೆ. 4:12, 13. ಇಬ್ರಿ. 6:1:ಪ್ರಾಯಸ್ಥರಿಗೋಸ್ಕರ, ಅಂದರೆ * ಆದಿ. 3:22; 1 ಅರಸು. 3:9; ಯೆಶಾ. 7:15:ತಪ್ಪು ಮತ್ತು ಸರಿಯಾದ್ದದನ್ನು ಗುರುತಿಸಲು, ಅಭ್ಯಾಸದ ಮೂಲಕ ನೈಪುಣ್ಯತೆಯನ್ನು ಹೊಂದಿದವರಿಗೋಸ್ಕರವಾಗಿದೆ.
*೫:೧ ಇಬ್ರಿ. 2:17:
†೫:೧ ಇಬ್ರಿ. 8:3:
‡೫:೧ ಇಬ್ರಿ. 8:3, 4; 9:9; 10:11:
§೫:೨ ಇಬ್ರಿ. 7:28:
*೫:೨ ಇಬ್ರಿ. 2:18; 4:15:
†೫:೩ ಯಾಜ. 4:3; 9:7; 16:6; ಇಬ್ರಿ. 7:27; 9:7:
‡೫:೪ ಅರಣ್ಯ. 16:5, 40; 18:7; 2 ಪೂರ್ವ. 26:18:
§೫:೪ ವಿಮೋ. 28:1; 1 ಪೂರ್ವ. 23:13:
*೫:೫ ಯೋಹಾ 8:54:
†೫:೫ ಇಬ್ರಿ. 1:5
‡೫:೬ ಕೀರ್ತ. 110:4; ಇಬ್ರಿ. 7:17, 21:
*೫:೭ ಕೀರ್ತ. 22:1, 2; ಮತ್ತಾ 27:46, 50; ಮಾರ್ಕ. 15:34, 37; ಲೂಕ. 23:46:
†೫:೭ ಮತ್ತಾ 26:39, 44; ಮಾರ್ಕ. 14:36, 39; ಲೂಕ 22:41, 44:
‡೫:೭ ಅಥವಾ, ಸಮರ್ಪಿಸಿ ಕೇಳಲ್ಪಟ್ಟು ಭಯದಿಂದ ಬಿಡುಗಡೆ ಹೊಂದಿದನು.
§೫:೮ ಇಬ್ರಿ. 1:2:
*೫:೮ ಫಿಲಿ. 2:8:
†೫:೯ ಇಬ್ರಿ. 2:10:
§೫:೧೦ ಇಬ್ರಿ. 5:6; 6:20:
*೫:೧೨ ಇಬ್ರಿ. 6:1:
§೫:೧೪ ಎಫೆ. 4:12, 13. ಇಬ್ರಿ. 6:1:
*೫:೧೪ ಆದಿ. 3:22; 1 ಅರಸು. 3:9; ಯೆಶಾ. 7:15: