೩
೧ ಆದರೆ ಪ್ರಿಯರೇ ನಾನಂತೂ * 1 ಕೊರಿ. 2:15:ಆತ್ಮಿಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ † 1 ಕೊರಿ. 2:14:ಪ್ರಾಪಂಚಿಕರೂ ‡ ಇಬ್ರಿ. 5:13.ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು. ೨ § ಇಬ್ರಿ. 5:1. ಯೋಹಾ. 16:12:ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ. ೩ ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. * 1 ಕೊರಿ. 1:11; 11:18; ಗಲಾ. 5:19, 20.ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ? ೪ † 1 ಕೊರಿ. 1:12.ಒಬ್ಬನು, ನಾನು ಪೌಲನವನು ಎಂದು, ಮತ್ತೊಬ್ಬನು, ನಾನು ಅಪೊಲ್ಲೋಸನವನು ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ?
ಸುವಾರ್ತೆಯನ್ನು ಸಾರುವವರು ದೇವರ ಕೈಯಲ್ಲಿ ಬರೀ ಸಾಧನಗಳಷ್ಟೆ, ಕಾರ್ಯಕರ್ತನು ದೇವರೇ
೫ ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ ‡ 2 ಕೊರಿ. 6:4; ಎಫೆ. 3:7; ಕೊಲೊ. 5:21:ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ § ರೋಮಾ 12:6:ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ. ೬ * 1 ಕೊರಿ. 4:15; 9:1; 15:1; ಅ. ಕೃ. 18:4-11; 2 ಕೊರಿ. 10:14, 15:ನಾನು ಸಸಿಯನ್ನು ನೆಟ್ಟೆನು. † ಅ. ಕೃ. 18:27:ಅಪೊಲ್ಲೋಸನು ನೀರನ್ನು ಹೊಯಿದನು. ‡ 1 ಕೊರಿ. 15:10.ಆದರೆ ಅದನ್ನು ಬೆಳೆಸಿದವನು ದೇವರೇ. ೭ ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು. ೮ ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. § ವ. 14; 1 ಕೊರಿ. 15:15,58.ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು. ೯ * ಮಾರ್ಕ. 16:20; 2 ಕೊರಿ. 6:1.ನಾವು ದೇವರ ಜೊತೆಕೆಲಸದವರು. ನೀವು † ಅಥವಾ, ದೇವರ ಸಾಗುವಳಿಯೂ. ದೇವರ ಕೃಷಿಗಳಾಗಿದ್ದೀರಿ. ‡ ಎಫೆ. 2:20-22; ಕೊಲೆ. 2:7; 1 ಪೇತ್ರ 2:5. ವ. 16:ದೇವರ ಮಂದಿರವೂ ಆಗಿದ್ದೀರಿ.
೧೦ § ಅಥವಾ. ದೇವರು ನನಗೆ ಅನುಗ್ರಹಿಸಿದ ಕೃಪೆಯನ್ನವಲಂಬಿಸಿ. ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ * ವ. 11, 12; ರೋಮಾ. 15:20:ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು. ೧೧ † ಎಫೆ. 2:20. ಯೇಸು ಕ್ರಿಸ್ತನೆಂಬ ‡ 2 ಕೊರಿ. 11:4; ಗಲಾ. 1:6, 7. ಯೆಶಾ. 28:16. ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. ೧೨ ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ, ೧೩ § 1 ಕೊರಿ. 4:5.ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು * 2 ಥೆಸ. 1:17.ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು. ೧೪ ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ † 1 ಕೊರಿ. 15:58.ಅವನಿಗೆ ಪ್ರತಿಫಲ ಸಿಕ್ಕುವುದು. ೧೫ ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ ‡ ಯೂದ. 23.ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು.
೧೬ § 1 ಕೊರಿ. 6:19; 2 ಕೊರಿ. 6:16; ಎಫೆ. 2:21:ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? ೧೭ ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ.
೧೮ ಯಾವನೂ ತನ್ನನ್ನು ತಾನೇ ಮೋಸಗೊಳಿಸದಿರಲಿ * 1 ಕೊರಿ. 8:2:ನಿಮ್ಮಲ್ಲಿ ಯಾವನಾದರೂ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವುದಾದರೆ ಅವನು ಜ್ಞಾನಿಯಾಗುವುದಕ್ಕಾಗಿ ಮೂರ್ಖನಾಗಲಿ ೧೯ ಯಾಕೆಂದರೆ † 1 ಕೊರಿ. 1:20:ಇಹಲೋಕದ ಜ್ಞಾನವು ದೇವರ ಮುಂದೆ ಮೂರ್ಖತನವಾಗಿದೆ. ‡ ಯೋಬ. 5:13:ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೆ ಹಿಡಿದುಕೊಳ್ಳುತ್ತಾನೆಂತಲೂ, ೨೦ § ಕೀರ್ತ. 94:11:ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳಿದುಕೊಳ್ಳುತ್ತಾನೆಂತಲೂ ಬರೆದದೆಯಲ್ಲಾ ೨೧ ಆದಕಾರಣ * 1 ಕೊರಿ. 3:4-6; 1:12; 4:6.ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹೊಗಳಿಕೊಳ್ಳದಿರಲಿ. ಯಾಕೆಂದರೆ † ರೋಮಾ. 8:28.ಸಮಸ್ತವೂ ನಿಮಗಾಗಿಯೇ ಇದೆ. ೨೨ ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ. ೨೩ ‡ 2 ಕೊರಿ. 10:7. ಗಲಾ. 3:29.ನೀವಂತೂ ಕ್ರಿಸ್ತನವರು, § 1 ಕೊರಿ. 11:3.ಕ್ರಿಸ್ತನು ದೇವರಿನವನು.
‡೩:೧ ಇಬ್ರಿ. 5:13.
§೩:೨ ಇಬ್ರಿ. 5:1. ಯೋಹಾ. 16:12:
*೩:೩ 1 ಕೊರಿ. 1:11; 11:18; ಗಲಾ. 5:19, 20.
‡೩:೫ 2 ಕೊರಿ. 6:4; ಎಫೆ. 3:7; ಕೊಲೊ. 5:21:
§೩:೫ ರೋಮಾ 12:6:
*೩:೬ 1 ಕೊರಿ. 4:15; 9:1; 15:1; ಅ. ಕೃ. 18:4-11; 2 ಕೊರಿ. 10:14, 15:
§೩:೮ ವ. 14; 1 ಕೊರಿ. 15:15,58.
*೩:೯ ಮಾರ್ಕ. 16:20; 2 ಕೊರಿ. 6:1.
†೩:೯ ಅಥವಾ, ದೇವರ ಸಾಗುವಳಿಯೂ.
‡೩:೯ ಎಫೆ. 2:20-22; ಕೊಲೆ. 2:7; 1 ಪೇತ್ರ 2:5. ವ. 16:
§೩:೧೦ ಅಥವಾ. ದೇವರು ನನಗೆ ಅನುಗ್ರಹಿಸಿದ ಕೃಪೆಯನ್ನವಲಂಬಿಸಿ.
*೩:೧೦ ವ. 11, 12; ರೋಮಾ. 15:20:
‡೩:೧೧ 2 ಕೊರಿ. 11:4; ಗಲಾ. 1:6, 7. ಯೆಶಾ. 28:16.
*೩:೧೩ 2 ಥೆಸ. 1:17.
‡೩:೧೫ ಯೂದ. 23.
§೩:೧೬ 1 ಕೊರಿ. 6:19; 2 ಕೊರಿ. 6:16; ಎಫೆ. 2:21:
‡೩:೧೯ ಯೋಬ. 5:13:
*೩:೨೧ 1 ಕೊರಿ. 3:4-6; 1:12; 4:6.
†೩:೨೧ ರೋಮಾ. 8:28.
‡೩:೨೩ 2 ಕೊರಿ. 10:7. ಗಲಾ. 3:29.