Galatians
ಪೌಲನು ಗಲಾತ್ಯದವರಿಗೆ ಬರೆದ ಪತ್ರಿಕೆ
೧
ವಂದನೆಯೂ ದೇವರ ಸ್ತೋತ್ರವೂ
೧ * ಗಲಾ. 1:11,12ಮನುಷ್ಯರಿಂದಾಗಲಿ ಮನುಷ್ಯರ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ † ಅ. ಕೃ. 9:6; 20:24; 22:10,15,21; 26:16; 1 ತಿಮೊ. 1:1ಯೇಸು ಕ್ರಿಸ್ತನ ಮುಖಾಂತರವೂ ಮತ್ತು ‡ ಅ. ಕೃ. 2:24ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲೋದ್ಯೋಗವನ್ನು ಹೊಂದಿದ ಪೌಲನೆಂಬ ನಾನು ಹಾಗೂ ೨ ನನ್ನ ಜೊತೆಯಲ್ಲಿರುವ ಎಲ್ಲಾ ಸಹೋದರರೂ § ಅ. ಕೃ. 14:21; 16:6; 1 ಕೊರಿ. 16:1ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವುದೇನೆಂದರೆ, ೩ * 1 ತಿಮೊ. 1:2ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ † ರೋಮಾ. 1:7; ಕೊರಿ. 1:3ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
೪ ಆತನು ನಮ್ಮನ್ನು ‡ ಎಫೆ. 2:2; 1 ಯೋಹಾ 5:19ಈಗಿನ ದುಷ್ಟ ಯುಗದಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ, § ಮತ್ತಾ 20:28; ರೋಮಾ. 4:25; 1 ಕೊರಿ. 15:3ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. ೫ ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯಾಗಲಿ. ಆಮೆನ್.
ಏಕೈಕ ಸುವಾರ್ತೆ
೬ ಕ್ರಿಸ್ತನ ಕೃಪೆಯಿಂದ ನಿಮ್ಮನ್ನು ಕರೆದಾತನನ್ನು ಬಿಟ್ಟು, ಇಷ್ಟು ಬೇಗನೆ * 2 ಕೊರಿ. 11:4; 1 ತಿಮೊ. 1:3ಬೇರೆ ಸುವಾರ್ತೆಯ ಕಡೆಗೆ ನೀವು ತಿರುಗಿದಿರೆಂದು ನಾನು ಆಶ್ಚರ್ಯಪಡುತ್ತೇನೆ. ೭ † ಅ. ಕೃ. 4:12; 1 ಕೊರಿ. 3:11ವಾಸ್ತವವಾಗಿ ಬೇರೊಂದು ಸುವಾರ್ತೆ ಇಲ್ಲ, ಆದರೆ ಕೆಲವರು ‡ ಗಲಾ. 5:10ನಿಮ್ಮಲ್ಲಿ ಬೇಧವನ್ನು ಹುಟ್ಟಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ೮ ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು, ನಾವೇ ಆಗಲಿ ಅಥವಾ § 2 ಕೊರಿ. 11:14ಪರಲೋಕದಿಂದ ಬಂದ ದೇವದೂತನೇ ಆಗಲಿ, ನಿಮಗೆ ಸಾರಿದರೆ ಅವನು * ರೋಮಾ. 9:3ಶಾಪಗ್ರಸ್ತನಾಗಲಿ. ೯ ನಾವು ಮೊದಲು ಹೇಳಿದಂತೆಯೇ ಈಗಲೂ ನಾನು ತಿರುಗಿ ಹೇಳುತ್ತೇನೆ. ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ † ರೋಮಾ. 9:3 ಅವನು ಶಾಪಗ್ರಸ್ತನಾಗುವನು.
೧೦ ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ‡ 1 ಥೆಸ. 2:4ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ.
ಪೌಲನು ಅಪೊಸ್ತಲನಾದ್ದದು ಹೇಗೆ
೧೧ ಸಹೋದರರೇ, § 1 ಕೊರಿ. 15:1-3ನಾನು ಸಾರಿದ ಸುವಾರ್ತೆಯಂತೂ ಕೇವಲ ಮನುಷ್ಯನಿಂದ ಬಂದದ್ದಲ್ಲವೆಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ೧೨ * ಗಲಾ. 1:1; 1 ಕೊರಿ. 11:3; 15:3ನಾನು ಅದನ್ನು ಮನುಷ್ಯನಿಂದ ಹೊಂದಲಿಲ್ಲ, ನನಗೆ ಯಾರೂ ಉಪದೇಶಿಸಲಿಲ್ಲ, ಬದಲಾಗಿ † ಗಲಾ. 1:16; 1 ಕೊರಿ. 2:10; 2 ಕೊರಿ. 12:1ಯೇಸು ಕ್ರಿಸ್ತನೇ ಅದನ್ನು ನನಗೆ ಪ್ರಕಟಪಡಿಸಿದನು. ೧೩ ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ‡ ಅ. ಕೃ. 26:4ನನ್ನ ನಡತೆ ಎಂಥದ್ದೆಂದು ನೀವು ಕೇಳಿದ್ದೀರಿ. § ಅ. ಕೃ. 8:3ನಾನು ದೇವರ ಸಭೆಯನ್ನು ಬಹಳವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು. ೧೪ ಇದಲ್ಲದೆ ನಾನು ನನ್ನ ಪಿತೃಗಳಿಂದ ಬಂದ ಸಂಪ್ರದಾಯಗಳ ಬಗ್ಗೆ ಬಹು ಅಭಿಮಾನವುಳ್ಳವನಾಗಿ, ನನ್ನ ಜನರೊಳಗೆ ಸಮಪ್ರಾಯದವರಾದ * ಫಿಲಿ. 3:6ಅನೇಕರಿಗಿಂತ ಯೆಹೂದ್ಯ ಮತಾಚಾರದಲ್ಲಿ ಆಸಕ್ತನಾಗಿದ್ದೆನು.
೧೫ ಆದರೆ † ಯೆಶಾ. 49:1,; ಯೆರೆಮೀಯನು 1:5ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ‡ ಅ. ಕೃ. 13:2; ಮಾರ್ಕ 6:3; ರೋಮಾ. 1:1ನನ್ನನ್ನು ಪ್ರತ್ಯೇಕಿಸಿ, ತನ್ನ ಕೃಪೆಯಿಂದ ಕರೆದ ದೇವರು, ೧೬ ತನ್ನ ಮಗನನ್ನು ನನ್ನೊಳಗೆ ಪ್ರಕಟಪಡಿಸುವುದಕ್ಕೆ ಮತ್ತು § ಗಲಾ. 2:9; ಅ. ಕೃ. 9:15ಅನ್ಯಜನರಲ್ಲಿ ಆತನನ್ನು ನಾನು ಪ್ರಸಿದ್ಧಿ ಪಡಿಸುವವನಾಗಬೇಕೆಂದು ಇಚ್ಛಿಸಿದನು. ನಾನು ಕೂಡಲೇ ಮನುಷ್ಯರ ಆಲೋಚನೆಯನ್ನು ಕೇಳದೆ, ೧೭ ಯೆರೂಸಲೇಮಿಗೆ ನನಗಿಂತ ಮೊದಲು ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರುಗಿ ದಮಸ್ಕಕ್ಕೆ ಬಂದೆನು.
೧೮ * ಅ. ಕೃ. 9:22-27; 22:17ಮೂರು ವರ್ಷಗಳ ತರುವಾಯ ಕೇಫನ ಪರಿಚಯವನ್ನು ಮಾಡಿಕೊಳ್ಳಬೇಕೆಂದು ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನಗಳು ಇದ್ದೆನು. ೧೯ ಆದರೆ † ಮತ್ತಾ 12:46; ಮಾರ್ಕ 6:3; ಅ. ಕೃ. 12:17ಕರ್ತನ ಸಹೋದರನಾದ ಯಾಕೋಬನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ. ೨೦ ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲವೆಂಬುದಕ್ಕೆ ಇಗೋ, ದೇವರೇ ಸಾಕ್ಷೀ.
೨೧ ‡ ಅ. ಕೃ. 9:30; 11:25, 26; 13:1ಆ ಮೇಲೆ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು. ೨೨ ಆದರೆ ಕ್ರಿಸ್ತನಲ್ಲಿರುವ § 1 ಥೆಸ. 2:14ಯೂದಾಯದ ಸಭೆಗಳಿಗೆ ನನ್ನ ಪರಿಚಯವಿರಲಿಲ್ಲ. ೨೩ ಪೂರ್ವದಲ್ಲಿ ನಮ್ಮನ್ನು ಹಿಂಸೆಪಡಿಸಿದವನು, ತಾನು ಹಾಳು ಮಾಡುತ್ತಿದ್ದ ನಂಬಿಕೆಯನ್ನು ಈಗ ಸಾರುತ್ತಿದ್ದಾನೆ ಎಂಬ ಸುದ್ದಿಯನ್ನು ಅವರು ಕೇಳಿ, ೨೪ ನನ್ನ ಕುರಿತಾಗಿ ದೇವರನ್ನು ಕೊಂಡಾಡಿದರು.
*೧:೧ ಗಲಾ. 1:11,12
†೧:೧ ಅ. ಕೃ. 9:6; 20:24; 22:10,15,21; 26:16; 1 ತಿಮೊ. 1:1
§೧:೨ ಅ. ಕೃ. 14:21; 16:6; 1 ಕೊರಿ. 16:1
*೧:೩ 1 ತಿಮೊ. 1:2
†೧:೩ ರೋಮಾ. 1:7; ಕೊರಿ. 1:3
§೧:೪ ಮತ್ತಾ 20:28; ರೋಮಾ. 4:25; 1 ಕೊರಿ. 15:3
*೧:೬ 2 ಕೊರಿ. 11:4; 1 ತಿಮೊ. 1:3
†೧:೭ ಅ. ಕೃ. 4:12; 1 ಕೊರಿ. 3:11
‡೧:೭ ಗಲಾ. 5:10
*೧:೮ ರೋಮಾ. 9:3
†೧:೯ ರೋಮಾ. 9:3
‡೧:೧೦ 1 ಥೆಸ. 2:4
*೧:೧೨ ಗಲಾ. 1:1; 1 ಕೊರಿ. 11:3; 15:3
†೧:೧೨ ಗಲಾ. 1:16; 1 ಕೊರಿ. 2:10; 2 ಕೊರಿ. 12:1
*೧:೧೪ ಫಿಲಿ. 3:6
†೧:೧೫ ಯೆಶಾ. 49:1,; ಯೆರೆಮೀಯನು 1:5
‡೧:೧೫ ಅ. ಕೃ. 13:2; ಮಾರ್ಕ 6:3; ರೋಮಾ. 1:1
§೧:೧೬ ಗಲಾ. 2:9; ಅ. ಕೃ. 9:15
†೧:೧೯ ಮತ್ತಾ 12:46; ಮಾರ್ಕ 6:3; ಅ. ಕೃ. 12:17
‡೧:೨೧ ಅ. ಕೃ. 9:30; 11:25, 26; 13:1
§೧:೨೨ 1 ಥೆಸ. 2:14