೩
ಅಂತ್ಯ ದಿನಗಳು
೧ ಆದರೆ * 1 ತಿಮೊ 4:1ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ. ೨ ಮನುಷ್ಯರು † ಫಿಲಿ 2:21ಸ್ವಾರ್ಥಚಿಂತಕರೂ, ‡ ಲೂಕ 16:14; 1 ತಿಮೊ 6:10ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, ೩ § ರೋಮಾ. 1:31ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, * ತೀತ 1:8ಒಳ್ಳೆಯದನ್ನು ದ್ವೇಷಿಸುವವರೂ, ೪ ದ್ರೋಹಿಗಳೂ, ದುಡುಕುವವರೂ, † 1 ತಿಮೊ 3:6; 6:4ದುರಹಂಕಾರವುಳ್ಳವರೂ, ‡ ಫಿಲಿ 3:19ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, ೫ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು. ೬ ಅವರಲ್ಲಿ ಕೆಲವರು § ತೀತ 1:11ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ. ೭ ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ * 1 ತಿಮೊ 2:4ಸತ್ಯದ ಪರಿಜ್ಞಾನವನ್ನು ಹೊಂದಲಾರದವರು. ೮ † ವಿಮೋ 7:11ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ. ೯ ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ‡ ವಿಮೋ 7:12; 8:18; 9:11ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
೧೦ § ಫಿಲಿ 2:22ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ, ೧೧ * ಅ. ಕೃ 13:14; 45, 50ಅಂತಿಯೋಕ್ಯ, † ಅ. ಕೃ 14:1,2,5ಇಕೋನ್ಯ, ‡ ಅ. ಕೃ 14:6,19ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, § ಕೀರ್ತ. 34:19ಅವೆಲ್ಲವುಗಳೊಳಗಿನಿಂದ * 2 ತಿಮೊ 4:17ಕರ್ತನು ನನ್ನನ್ನು ಬಿಡಿಸಿದನು. ೧೨ † ಅ. ಕೃ 14:22ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು. ೧೩ ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ‡ ಪ್ರಕ 22:11ಹೆಚ್ಚಾದ ಕೆಟ್ಟತನಕ್ಕೆ ಹೋಗುವರು. ೧೪ § 2 ತಿಮೊ 1:13ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು. ೧೫ * 2 ತಿಮೊ 1:5ಚಿಕ್ಕಂದಿನಿಂದಲೂ ನಿನಗೆ † ಯೋಹಾ 5:39ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ‡ ಕೀರ್ತ 119:99ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ. ೧೬ ದೈವ ಪ್ರೇರಿತವಾದ § ರೋಮ 15:4; 2 ಪೇತ್ರ 1:20,21ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ೧೭ ಆದರಿಂದ * 1 ತಿಮೊ 6:11ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ದನಾಗುವನು.
*೩:೧ 1 ತಿಮೊ 4:1
†೩:೨ ಫಿಲಿ 2:21
§೩:೩ ರೋಮಾ. 1:31
*೩:೩ ತೀತ 1:8
†೩:೪ 1 ತಿಮೊ 3:6; 6:4
‡೩:೪ ಫಿಲಿ 3:19
§೩:೬ ತೀತ 1:11
*೩:೭ 1 ತಿಮೊ 2:4
†೩:೮ ವಿಮೋ 7:11
‡೩:೯ ವಿಮೋ 7:12; 8:18; 9:11
§೩:೧೦ ಫಿಲಿ 2:22
*೩:೧೧ ಅ. ಕೃ 13:14; 45, 50
†೩:೧೧ ಅ. ಕೃ 14:1,2,5
‡೩:೧೧ ಅ. ಕೃ 14:6,19
*೩:೧೧ 2 ತಿಮೊ 4:17
†೩:೧೨ ಅ. ಕೃ 14:22
‡೩:೧೩ ಪ್ರಕ 22:11
§೩:೧೪ 2 ತಿಮೊ 1:13
*೩:೧೫ 2 ತಿಮೊ 1:5
†೩:೧೫ ಯೋಹಾ 5:39
‡೩:೧೫ ಕೀರ್ತ 119:99
§೩:೧೬ ರೋಮ 15:4; 2 ಪೇತ್ರ 1:20,21
*೩:೧೭ 1 ತಿಮೊ 6:11