೪
ದುರ್ಬೋಧಕರು
೧ ಆದರೂ * 2 ಥೆಸ. 2:3-9; 2 ತಿಮೊ. 3:1; ಕೊರಿ 11:19ಮುಂಬರುವ ದಿನಗಳಲ್ಲಿ ಕೆಲವರು † 1 ಯೊಹಾ. 4:6ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ. ೨ ‡ 1 ಥೆಸ. 2:3; 2 ಥೆಸ. 2:11ಕಪಟದಿಂದ ಸುಳ್ಳಾಡುವವರು, ಸ್ವಂತ ಮನಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು, ೩ ಅವರು ವಿಶ್ವಾಸಿಗಳಿಗೆ § ಇಬ್ರಿ. 13:4ಮದುವೆಯಾಗಬಾರದೆಂದತಲೂ, ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ, * ರೋಮಾ. 14:6 14, 20ಅವರು ಕೃತಜ್ಞತಾಸ್ತುತಿಮಾಡಿ, ತಿನ್ನುವುದಕ್ಕೋಸ್ಕರ † ಆದಿ. 1:29; 9:3ದೇವರು ಉಂಟುಮಾಡಿದ ‡ ಕೊಲೊ. 2:16ಆಹಾರವನ್ನು ತಿನ್ನಬಾರದೆಂತಲೂ ಹೇಳುವರು. ೪ § ಆದಿ. 1:31ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ, ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು * ಅ. ಕೃ. 10:15ತಿರಸ್ಕರಿಸಬೇಕಾಗಿಲ್ಲ. ೫ ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ.
೬ † 2 ತಿಮೊ. 3:14, 15ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ, ನೀನು ಅನುಸರಿಸುತ್ತಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದಿದವನಾಗಿ, ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವಿ. ೭ ಅಜ್ಜಿ ಕಥೆಗಳನ್ನೂ ‡ 1 ತಿಮೊ. 1:4ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು, ನೀನು ದೇವಭಕ್ತಿಯ ವಿಷಯದಲ್ಲಿ § ಇಬ್ರಿ. 5:14ಸಾಧನೆಮಾಡಿಕೋ. ೮ * ದೇಹದಂಡನೆ; ಕೊಲೊ. 2:23ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, † 1 ತಿಮೊ. 6:6ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು. ‡ ಕೀರ್ತ 37:4,9,11; 84:11; 145:19; ಜ್ಞಾ. 19:23; ಮತ್ತಾ 6:33; ಮಾರ್ಕ 10:30ಅದಕ್ಕೆ ಇಹಪರಗಳಲ್ಲಿನ ಜೀವನಕ್ಕೆ ವಾಗ್ದಾನ ಉಂಟು. ೯ § 1 ತಿಮೊ. 1:15ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ. ೧೦ ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ, ಪ್ರಯಾಸಪಡುತ್ತಿದ್ದೇವೆ, ಯಾಕೆಂದರೆ * 1 ತಿಮೊ. 2:4; ಯೋಹಾ 4:42ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ.
೧೧ † 1 ತಿಮೊ. 5:7; 6:2ಈ ಸಂಗತಿಗಳನ್ನು ನೀನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು. ೧೨ ‡ 1 ಕೊರಿ. 16:11; ತೀತ 2:15ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ § ತೀತ 2:7; 1 ಪೇತ್ರ 5:3ನೀನೇ ಮಾದರಿಯಾಗಿರು. ೧೩ ನಾನು ಬರುವ ತನಕ ವೇದವಾಕ್ಯವನ್ನು ಓದಿ ಹೇಳುವುದರಲ್ಲಿಯೂ, ಪ್ರಬೋಧಿಸುವುದರಲ್ಲಿಯೂ, ಉಪದೇಶಿಸುವುದರಲ್ಲಿಯೂ ಆಸಕ್ತನಾಗಿರು. ೧೪ * 2 ತಿಮೊ. 1:6; 1 ಥೆಸ. 5:19ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು † ಅ. ಕೃ. 20:17ಸಭೆಯ ಹಿರಿಯರು ‡ 1 ತಿಮೊ. 1:18ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ § ಅ. ಕೃ. 6:6ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ. ೧೫ ಈ ಕಾರ್ಯಗಳನ್ನು ಸಾಧಿಸುತ್ತಾ, ಅವುಗಳಲ್ಲಿ ಮಗ್ನನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವುದು* ಕಾಣಿಸುವುದು. ೧೬ † ಅ. ಕೃ. 20:28ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು ‡ ಯೆಹೆ. 33:9ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
*೪:೧ 2 ಥೆಸ. 2:3-9; 2 ತಿಮೊ. 3:1; ಕೊರಿ 11:19
†೪:೧ 1 ಯೊಹಾ. 4:6
‡೪:೨ 1 ಥೆಸ. 2:3; 2 ಥೆಸ. 2:11
§೪:೩ ಇಬ್ರಿ. 13:4
*೪:೩ ರೋಮಾ. 14:6 14, 20
†೪:೬ 2 ತಿಮೊ. 3:14, 15
‡೪:೭ 1 ತಿಮೊ. 1:4
§೪:೭ ಇಬ್ರಿ. 5:14
*೪:೮ ದೇಹದಂಡನೆ; ಕೊಲೊ. 2:23
†೪:೮ 1 ತಿಮೊ. 6:6
‡೪:೮ ಕೀರ್ತ 37:4,9,11; 84:11; 145:19; ಜ್ಞಾ. 19:23; ಮತ್ತಾ 6:33; ಮಾರ್ಕ 10:30
§೪:೯ 1 ತಿಮೊ. 1:15
*೪:೧೦ 1 ತಿಮೊ. 2:4; ಯೋಹಾ 4:42
†೪:೧೧ 1 ತಿಮೊ. 5:7; 6:2
‡೪:೧೨ 1 ಕೊರಿ. 16:11; ತೀತ 2:15
§೪:೧೨ ತೀತ 2:7; 1 ಪೇತ್ರ 5:3
*೪:೧೪ 2 ತಿಮೊ. 1:6; 1 ಥೆಸ. 5:19
‡೪:೧೪ 1 ತಿಮೊ. 1:18
*೪:೧೫ ಕಾಣಿಸುವುದು
‡೪:೧೬ ಯೆಹೆ. 33:9