82
ಸ್ತುತಿಗೀತೆ.
ರಚನೆಗಾರ: ಆಸಾಫ.
1 ದೇವಾದಿದೇವನು ತನ್ನ ಸಭೆಯಲ್ಲಿ* ದೇವಾದಿದೇವನು ತನ್ನ ಸಭೆಯಲ್ಲಿ ಇಲ್ಲಿ ಇದರರ್ಥ, ಇಸ್ರೇಲ್ ನಾಯಕರುಗಳ ಸಭೆಯಲ್ಲಿ ಎಂದಿರಬಹುದು. ಅನೇಕಸಲ, ನಾಯಕರನ್ನು ಮತ್ತು ರಾಜರುಗಳನ್ನು ದೇವರುಗಳೆಂದು ಕರೆಯಲಾಗಿದೆ. ನಿಂತುಕೊಂಡು
ದೇವರುಗಳಿಗೆ ನ್ಯಾಯತೀರ್ಪು ನೀಡುವನು.
2 ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”
3 “ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
4 ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
ಅವರನ್ನು ದುಷ್ಟರಿಂದ ರಕ್ಷಿಸಿರಿ.
5 “ಅವರಿಗೆ ಏನೂ ಗೊತ್ತಿಲ್ಲ.
ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
6 ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
“ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
7 ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”
8 ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!
*82:1: ದೇವಾದಿದೇವನು ತನ್ನ ಸಭೆಯಲ್ಲಿ ಇಲ್ಲಿ ಇದರರ್ಥ, ಇಸ್ರೇಲ್ ನಾಯಕರುಗಳ ಸಭೆಯಲ್ಲಿ ಎಂದಿರಬಹುದು. ಅನೇಕಸಲ, ನಾಯಕರನ್ನು ಮತ್ತು ರಾಜರುಗಳನ್ನು ದೇವರುಗಳೆಂದು ಕರೆಯಲಾಗಿದೆ.